ಮುಖ್ಯ ವಿಷಯಕ್ಕೆ ಹೋಗಿ (Skip to main content)
ಪ್ರಸಿದ್ಧ ಚೀನೀ ಕಥೆಗಳು
14% ರಿಯಾಯಿತಿ
ಅನುವಾದ

ಪ್ರಸಿದ್ಧ ಚೀನೀ ಕಥೆಗಳು

ಲೇಖಕ: ಡಾ. ವಿಜಯಾ ಸುಬ್ಬರಾಜ್

₹240₹28014% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಈ ಸಂಕಲನದಲ್ಲಿ, ಇದಕ್ಕೆ ಬೇರೆಯೇ ಆದ ಇನ್ನೊಂದು ಆಯಾಮವಿದೆ. ಎಲ್ಲ ಕಥೆಗಳಲ್ಲಿ ಹೆಚ್ಚಿಗೆ ಹೆಣ್ಣುಗಳೇ ಕೇಂದ್ರ ಪಾತ್ರಗಳು. ಹೆಣ್ಣಿನ ಸಹಜ ಸಂಕಷ್ಟಗಳು ಒಂದು ತೆರನಾದರೆ, ಮತ್ತೊಂದು, ಒಂದು ನಿರ್ದಿಷ್ಟ ಚಾರಿತ್ರಿಕ ಘಟನೆಯಿಂದ, ಸೃಷ್ಟಿಯಾಗುವ ಭಯಾನಕ ಸಂಗತಿಗಳ ಸುಳಿಯಲ್ಲಿ ಸಿಕ್ಕು ಏನೆಲ್ಲ ಅನುಭವಿಸಿದ್ದಾರೆ ಎನ್ನುವುದನ್ನು ಬಿಂಬಿಸುವ ಕಥಾಸಂದರ್ಭಗಳಲ್ಲಿ ಚೈನಾದ ಮಹಿಳೆಯರು, ಅನುಭವಿಸಿದ ಹಿಂಸೆ, ಯಾತನೆಗಳ ಸ್ವರೂಪದ ವಿವರಗಳು, ನಮಗಿಂತ ಹೆಚ್ಚಿನ ನೋವು ಸಂಕಷ್ಟಗಳನ್ನು ಅನುs ವಿಸಿದ್ದನ್ನು ನಮ್ಮ ಮುಂದೆ ಢಾಳಾಗಿ ಕಾಣುವಂತೆ ಆಗಿದೆ. vii ಚೈನಾ ಕಮ್ಯುನಿಷ್ಟ್ ದೇಶ, ರಷ್ಯಾದ ಕಮ್ಯುನಿಸಂನಿಂದ ಭ್ರಮನಿರಸನಗೊಂಡು, ಚೈನಾದ ಕಮ್ಯುನಿಸ್ಟ್ ಪಾರ್ಟಿ ಚೇರ್‌ಮನ್ ಆಗಿದ್ದ ಮಾವೊ ಜೆಂಡೋಂಗ್ ಸಮಾಜೋ ರಾಜಕೀಯ ಚಳುವಳಿಯೊಂದನ್ನು ಹುಟ್ಟು ಹಾಕಿ ಅದನ್ನು ಕಲ್ಚರಲ್ ರೆವುಲ್ಯೂಷನ್ (ಸಾಂಸ್ಕೃತಿಕ ಕ್ರಾಂತಿ) ಎಂದು ಕರೆದ. ಕ್ಯಾಪಿಟಲಿಸ್ಟ್ ಮತ್ತು ಟ್ರೆಡಿಷನಲಿಸ್ಟ್ ಅಂಶಗಳನ್ನು ಸಂಪೂರ್ಣವಾಗಿ ಉಚ್ಚಾಟನೆ ಮಾಡಿ ಚೈನಾದ ಸಮಾಜವನ್ನು ಪರಿಷ್ಕರಿಸುವ ಉದ್ದೇಶವನ್ನು ಮುಂದಿಕ್ಕಿಕೊಂಡು ‘ಗ್ಯಾಂಗ್ ಆಫ್ ಫೋರ್’ ಎನ್ನುವ ರಾಜಕೀಯ ಗುಂಪೊಂದರ ಮೂಲಕ, ೧೯೬೬-೧೯೭೬ರವರೆಗೂ, ಚೈನಾದಲ್ಲಿ ಒಂದು ದೊಡ್ಡ ಕೋಲಾಹಲವನ್ನೇ ಸೃಷ್ಟಿಸಲಾಯಿತು. ಈ ಗುಂಪು ಹಿಂಸೆ, ಕ್ರೌರ್ಯಗಳ ಮೂಲಕ ಒಂದು ಭಯಾನಕ ವಾತಾವರಣವನ್ನೇ ಸೃಷ್ಟಿಸಿ ಜನ ಸಾಮಾನ್ಯರ ಬದುಕನ್ನು ಅಸಹನೀಯವಾಗಿಸಿತು. ಅದರಲ್ಲಿಯೂ ಬುದ್ಧಿಜೀವಿಗಳು, ಕಲಾವಿದರು, ಯುವಜನರು, ಸಾಮಾಜಿಕರು ಮೊದಲಾದವರನ್ನು ಹುಡುಕಿ ಹುಡುಕಿ ತೆಗೆದು ಅವರೆಲ್ಲರನ್ನೂ ಪ್ರಗತಿ ವಿರೋಧೀಗಳೆಂಬ ಆರೋಪ ಹೊರಿಸಿ, ಕಂಡಕಂಡಲ್ಲಿ ಬಂಧನಕ್ಕೆ ಒಳಗಾಗಿಸಿ, ನಿರ್ದಾಕ್ಷಿಣ್ಯವಾಗಿ, ಹೊಡೆದು ಬಡಿದು ಇಲ್ಲವೆ ಗುಂಡಿಕ್ಕಿ ಸಾಯಿಸಿದರು. ಅಸಂಖ್ಯಾತ ಮಂದಿಯ ಮಾರಣಹೋಮ ನಡೆಯಿತು. ಮತ್ತೂ ಕೆಲವರನ್ನು ಅವರ ಅಧಿಕಾರ ಸ್ಥಾನಗಳಿಂದ ವಜಾಮಾಡಿ ಸುಧಾರಣೆಯ ಹೆಸರಿನಲ್ಲಿ, ಶಿಕ್ಷೆಯ ರೂಪದಲ್ಲಿ ಹಳ್ಳಿಗಾಡು ಪ್ರದೇಶಗಳಲ್ಲಿ ದುಡಿಯಲು ಕಳಿಸಲಾಯಿತು. ಅವರ ಮೇಲಿದ್ದ ಆರೋಪಗಳ ವಿಚಾರಣೆಗಾಗಲೀ ಅಪರಾಧಿಗಳಿಗೆ ತಮ್ಮ ಮೇಲಿನ ಅಪರಾಧಗಳು ನಿರಾಧಾರವೆಂದು ಸಾಬೀತು ಪಡಿಸಲು ಅವಕಾಶಗಳಾಗಲಿ ಇರಲಿಲ್ಲ. ಇಂತಹ ಅಮಾನುಷ ವರ್ತನೆ ೧೯೭೬ರವರೆಗೂ ಮುಂದುವರೆದಿತ್ತು. ಈ ಸಂಕಲನದ ಕತೆಗಾರ್ತಿಯರು ಇಪ್ಪತ್ತನೇ ಶತಮಾನದ ಇಪ್ಪತ್ತರ ದಶಕದಿಂದ ಐವತ್ತರ ದಶಕದವರೆಗಿನ ಕಾಲಘಟ್ಟದಲ್ಲಿ ಹುಟ್ಟಿದವರಾಗಿದ್ದು, ಸಾಂಸ್ಕೃತಿಕ ಕ್ರಾಂತಿಯ ಭೀಕರ ಪರಿಣಾಮಗಳನ್ನು ಕಂಡುಂಡವರಾಗಿದ್ದರು. ಆದ್ದರಿಂದ ತಮ್ಮ ಪ್ರತ್ಯಕ್ಷಾನುಭವಗಳನ್ನು ಹಿನ್ನೆಲೆಯಾಗಿಸಿಕೊಂಡು, ಕಥಾಸಂದರ್ಭಗಳಿಗೆ ಅಳವಡಿಸಿಕೊಂಡು ಅತ್ಯಂತ ಸೂಕ್ಷ್ಮವಾಗಿಯೂ ಮಾರ್ಮಿಕವಾಗಿಯೂ ತಮ್ಮ ವಯೋಮಾನದ ಆಲೋಚನೆಗಳಿಗೆ ಅನುಗುಣವಾಗಿ ಬಿತ್ತರಿಸಿದ್ದಾರೆ. ಪ್ರತಿಯೊಂದು ಕತೆಯಲ್ಲಿಯೂ, ಯಾವುದೋ ಒಂದು ಸಂದರ್ಭದಲ್ಲಿ, ಸಾಂಸ್ಕೃತಿಕ ಕ್ರಾಂತಿಯ ಪರಿಣಾಮವಾಗಿ ನಲುಗಿದ ಪಾತ್ರಗಳು ಕಾಣಿಸಿಕೊಳ್ಳುತ್ತವೆ. ‘ಹುಲ್ಲುಗಾವಲ ಹಾದಿಗುಂಟ’ದ ಷಿಜುನ್, ಕಾಡುಹಕ್ಕಿಗಳ ಪಯಣದ ಕಿನ್‌ಗು ಆನ್‌ಷು, ‘ಕನಸಿನಲ್ಲಿ ಮಧುರವಾದ ತರಂಗಗಳು’ ಕಥೆಯಲ್ಲಿ, ಸುಳ್ಳು ಆರೋಪದ ಮೇಲೆ ಗ್ಯಾಂಗ್ ಆಫ್ ಫೋರ್’ರಿಂದ ತಂದೆ ತಾಯಿಯರನ್ನು ಕಳೆದುಕೊಂಡು ಅನಾಥವಾದದ್ದೇ ಅಲ್ಲದೆ ಅಜ್ಞಾತವಾಗಿ ಬದುಕಬೇಕಾದ ಅನಿವಾರ‍್ಯತೆಗೆ ಒಳಗಾದ ಲಿಯಾಂಗ್ ಜಿಯಾ, ‘ಪುಟ್ಟ ಅಂಗಳದಲ್ಲಿನ ಬದುಕು’ ಕಥೆಯಲ್ಲಿ ಯುವ ಪೀಳಿಗೆಯವರು, ಕಲಾವಿದರು ಕ್ರಾಂತಿಯ ಪರಿಣಾಮವಾಗಿ ಸೃಷ್ಟಿಯಾದ ಆರ್ಥಿಕ ಇಕ್ಕಟ್ಟು ಬಿಕ್ಕಟ್ಟುಗಳಲ್ಲಿ ಬದುಕಬೇಕಾದ ಅನಿವಾರ‍್ಯತೆಯ ಸಂಕಟ ಅನುಭವಿಸುತ್ತಿರುವ ಯುವ ದಂಪತಿಗಳು ಹೀಗೆ ಪ ತಿಯೊಬ್ಬರೂ ಕ್ರಾಂತಿಯ ಪರಿಣಾಮದ ಬಿಸಿಯನ್ನು ಅನುಭವಿಸಿದವರೆ. viii ಪಾತ್ರಗಳ ಮೂಲಕವೇ, ಸಾಂಸ್ಕೃತಿಕ ಕ್ರಾಂತಿಯ ಪರಿಣಾಮಗಳ ಚಿತ್ರವು ಮೂಡುವುದರ ಜೊತೆಗೆ ಜನರ ದೈನಂದಿನ ಬದುಕಿನಲ್ಲಾದ ಪಲ್ಲಟಗಳನ್ನು ನಮ್ಮ ಮುಂದಿಡುತ್ತದೆ. ಅಲ್ಲದೆ ಈ ಕಥೆಗಳು ಚೀನಾದೇಶದ ಒಂದು ಕಾಲಘಟ್ಟದಲ್ಲಿ ನಡೆದ ಕ್ರಾಂತಿಯ ಮೂಲಕ ರಾಜಕೀಯ ಹುನ್ನಾರಗಳನ್ನು, ಅದರ ಪರಿಣಾಮಗಳನ್ನು, ಎಲ್ಲಾ ಆಯಾಮಗಳೊಂದಿಗೆ ಪರಿಚಯಿಸುತ್ತವೆ. ತನ್ಮೂಲಕ ಸ್ತ್ರೀ ಮನಸ್ಸುಗಳು ಗೃಹ ಕೃತ್ಯಗಳ ಆಚೆಗೂ ತಮ್ಮ ಪ್ರಜ್ಞೆಯನ್ನು ವಿಸ್ತರಿಸಿ, ಸಮಕಾಲೀನ ರಾಜಕೀಯ, ಸಾಂಸ್ಕೃತಿಕ ಸನ್ನಿವೇಶಗಳಿಗೂ ಹೇಗೆ ಸ್ಪಂದಿಸಬಲ್ಲರೆಂಬುದನ್ನು ಇಲ್ಲಿನ ಕಥೆಗಳು ಅನುವಾದದ ಮೂಲಕ ಓದುಗರಿಗೆ ತಲುಪಿಸಬೇಕೆನ್ನುವ ಉದ್ದೇಶದಿಂದಲೇ ಈ ಕಥಾಸಂಕಲನ ಹೊರತರಲು ಮುಂದಾದೆ.

ವಿಶೇಷತೆಗಳು

ISBN 978-93-81244-56-2z
ಭಾಷೆಕನ್ನಡ
ಪುಟಗಳು244
ಪ್ರಕಟಣೆ ವರ್ಷ2017
ಆವೃತ್ತಿ3rd Edition
ತೂಕ500 ಗ್ರಾಂ
ಆಯಾಮಗಳು-