ವಿಮರ್ಶೆ
ನವೋದಯ ಸಾಹಿತ್ಯದ ಹಿನ್ನೆಲೆ, ಪ್ರೇರಣೆ ಮತ್ತು ಪ್ರಭಾವಗಳು
ಲೇಖಕ: ಕೇಶವ ಶರ್ಮ. ಕೆ
₹425₹50015% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಕಲ್ಪನೆಯನ್ನು ಹುಟ್ಟುಹಾಕಿದ್ದು ಸತ್ಯ. ಮನುಷ್ಯನು ಸಾಮಾನ್ಯನಾಗಿ ಇರುವುದು ಮತ್ತು ವಿಜ್ಞಾನಿಯಾಗಿ ಇರುವುದು ಎರಡೂ ಬೇರೆ ಬೇರೆ ಪ್ರಕ್ರಿಯೆಗಳು ಎನ್ನುವುದು ಬಂದಿರುವುದೂ ಪುನರುಜ್ಜೀವನದ ಕಾಲದಲ್ಲಿ. ವಿಜ್ಞಾನವು ವಸ್ತುವನ್ನು ನೋಡುವುದು ಒಂದು ಕ್ರಮದಲ್ಲಿ. ಆದರೆ ಅದನ್ನೇ ಒಬ್ಬ ಕವಿಯು ನೋಡುವುದು ಮತ್ತೊಂದು ಕ್ರಮದಲ್ಲಿ. ಆದ್ದರಿಂದ ಅನನ್ಯತೆ ಮತ್ತು ನಿಸರ್ಗದ ಪ್ರಶ್ನೆಯು ಇಲ್ಲಿ ಬೇರೆಯಾಗುತ್ತದೆ. ಹಾಗೆಂದು ಇದರ ಪ್ರಶ್ನೆಯು ಅತ್ಯಂತ ಸರಳವಾದ್ದು ಎಂದು ಭಾವಿಸುವುದು ಸಾಧ್ಯವಿಲ್ಲ. ಯಾವುದನ್ನು ನಾವು ಈಗ ಅತ್ಯಂತ ಮುಖ್ಯವಾದ್ದು ಎಂದು ಹೇಳುತ್ತೇವೆಯೋ ಅದರ ಸ್ವರೂಪವನ್ನು ನಾವು ನಿರ್ಧಾರ ಮಾಡುವುದು ಹೇಗೆ ಎನ್ನುವುದಕ್ಕೆ ಬೇರೆ ಬೇರೆ ಚರ್ಚೆಗಳು ಬಂದಿವೆ. ಈ ಪ್ರಶ್ನೆಯು ಪುನರುಜ್ಜೀವನದ ಕಾಲದಲ್ಲಿ ಬೇರೆ ಬೇರೆ ಥರ ಬಂದಿರುವುದೂ ಅಷ್ಟೇ ನಿಜ. ಮನುಷ್ಯ ಮತ್ತು ಅವನ ಅಭಿವೃದ್ಧಿಯಲ್ಲಿ ನಿಜವಾಗಿಯೂ ಯಾವುದು ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ನೋಡುವಾಗ ಕೆಲವರು ಅದನ್ನು ಒಂದು ನೈತಿಕವಾದ ರೂಪವೆಂಬಂತೆ ನೋಡುತ್ತಾರೆ. ಅಡರ್ನೊ ಒಂದು ಹಂತದಲ್ಲಿ ಮನುಷ್ಯ ಮತ್ತು ಅವನ ನೈತಿಕವಾದ ನೆಲೆಯನ್ನೂ ನಾವು ಗಮನಿಸುವುದು ಅಗತ್ಯವೆಂದು ಹೇಳುತ್ತಾನೆ. ಅಡರ್ನೊ ಆಗಿನ ತತ್ವಜ್ಞಾನವು ಮನುಷ್ಯರ ವಿಷಯಗಳನ್ನು ಹೇಳುತ್ತದೆ ಎಂದು ಭಾವಿಸುತ್ತಾನೆ. ಮನುಷ್ಯ ಮತ್ತು ಅವನ ಅಹಮಿಕೆಯು ಹೇಗೆ ಕೆಲಸವನ್ನು ಮಾಡುತ್ತದೆ ಎಂದೂ ಇಲ್ಲಿ ಅವನು ಪ್ರಸ್ತಾವಿಸುತ್ತಾನೆ . ಕೈಗಾರಿಕೆಗಳು ಮತ್ತು ನಮ್ಮ ಜೀವನದ ಕ್ರಮಗಳು ಜೊತೆಗೆ ಹೋದರೆ ಅದರ ಪರಿಣಾಮವು ಒಂದೇ ರೀತಿಯಲ್ಲಿ ಇರುವುದಿಲ್ಲ. ಮನುಷ್ಯನಿಗೆ ಪುನರುಜ್ಜೀವನದ ತರುವಾಯ ಜಗತ್ತನ್ನು ತಾನು ನಿಯಂತ್ರಿಸಬಲ್ಲೆ ಎನ್ನುವ ಧೈರ‍್ಯವು ಬಂದಿತು.
ಪ್ರಾಯ್ಡ್ ಇದನ್ನು ಅಹಿಮಿಕೆ ಮತ್ತು ಸ್ವಾಯತ್ತತೆ ಎಂದು ಹೇಳುತ್ತಾನೆ. ಪುನರುಜ್ಜೀವನದ ಕಾಲದಲ್ಲಿ ಪುರಾಣಗಳಿಗೆ ಬೇರೆ ಅರ್ಥವನ್ನು ಕೊಡಲಾಯಿತು. ಮನೋಸ್ಥಿತಿ ಮತ್ತು ಪುರಾಣ ಎನ್ನುವುದು ಹೇಗೆ ಅನ್ವಯವನ್ನು ಮಾಡುತ್ತದೆ ಎಂದು ಅನೇಕರು ವಿವರಿಸಿದರು. ವಾಸ್ತವವನ್ನು ಪುರಾಣಗಳು ಹೇಳುವುದು ಬೇರೆ ಕ್ರಮದಲ್ಲಿ. ಆದರೆ ವಿಜ್ಞಾನವು ಹೇಳುವುದು ಮತ್ತೊಂದು ಕ್ರಮದಲ್ಲಿ. ಮನುಷ್ಯ ಮತ್ತು ಅವನ ನಂಬಿಕೆಗಳು ಬದಲಾದವು. ಪುರಾಣಗಳು ಪುರಾಣಗಳೇ ಆಗಿರುವುದು ಬೇರೆ. ಆದರೆ ಅದರ ಅನ್ವಯಗಳ ಪ್ರಶ್ನೆಯು ಬೇರೆ. ಅನ್ವಯಗಳ ಪ್ರಶ್ನೆಗಳು ಬಂದಾಗ ಮನುಷ್ಯನು ತನ್ನ ಬುದ್ಧಿವಂತಿಕೆಯನ್ನು ಬಳಸುತ್ತಾನೆ. ಪುನರುಜ್ಜೀವನವು ಮತ್ತೊಂದು ಕೆಲಸವನ್ನು ಮಾಡಿತು. ಅದು ವಸ್ತು ಮತ್ತು ವಿಷಯಗಳಿಗೆ ಅನುಗುಣವಾಗಿ ವ್ಯತ್ಯಾಸಗಳನ್ನು ರೂಪಿಸಿತು. ಮನುಷ್ಯ ಮತ್ತು ಅವನ ವಿವೇಕವು ಹೇಗೆ ಮುಖ್ಯವಾಗುತ್ತದೆ ಎನ್ನುವುದೂ ಇಲ್ಲಿ ಅತ್ಯಂತ ಮುಖ್ಯ. ದೇವರು ಮತ್ತು ಅವನ ಆರಾಧನೆಯಿಂದ ಏನೂ ಆಗಲಾರದು ಎನ್ನುವುದು ಅಷ್ಟೇ ನಿಜ. ಜಗತ್ತಿಗೆ ಒಂದು ನಿಯಮವು ಇದೆ. ಆ ನಿಯಮಕ್ಕೆ ಅನುಸಾರವಾಗಿ ನಾವು ಕೆಲಸವನ್ನು ಮಾಡುತ್ತೇವೆ. ಆದ್ದರಿಂದ ಮನುಷ್ಯ ಮತ್ತು ಅವನ ಅಸ್ತಿತ್ವಕ್ಕೆ ಒಂದು ಅರ್ಥವೂ ಇದೆ. ಹಳೆಯ ಸಮಾಜ ಮತ್ತು ಹೊಸ ಸಮಾಜ ಎನ್ನುವುದೇ ಬೇರೆ ಪರಿಕಲ್ಪನೆಗಳು. ಹಳೆಯ ಮಾದರಿಯ ತಾರತಮ್ಯ ಎನ್ನುವುದು ಹೇಗೆ ಹೊಸ ಯುಗದಲ್ಲಿ ಬದಲಾಯಿತು ಎನ್ನುವುದೂ ಇಲ್ಲಿ. ಮುಖ್ಯ. ಹಳೆಯ ಯಜಮಾನಿಕೆಯ ಪ್ರಶ್ನೆಗಳು ಇಲ್ಲಿ ಬದಲಾದವು. ವ್ಯಕ್ತಿ ಮತ್ತು ಅವನ ಅನನ್ಯತೆಯು ಬೇರೆಯಾದಾಗ ಮನುಷ್ಯನ ಜೀವನಕ್ರಮವು ಬದಲಾಗುತ್ತದೆ. ಆದರೆ ಆಗ ಸಮಾಜವೇ ವ್ಯಕ್ತಿಗಳನ್ನು ಒಂದು ಪ್ರತ್ಯೇಕವಾದ ಭಾಗ ಎಂದು ಭಾವಿಸಿದ್ದು ಸತ್ಯವಾಗಿದೆ. ಅಡರ್ನೊ ಅದನ್ನು ವ್ಯಕ್ತಿವಾದಕ್ಕೆ ಮನುಷ್ಯರನ್ನು ದೂಕಿತು ಎಂದು ಹೇಳುತ್ತಾನೆ. ಹಿಟ್ಲರ್ ಮೊದಲಾದವರಿಗೆ ಈ ವ್ಯಕ್ತಿವಾದವೇ ಅತ್ಯಂತ ಅಪಾಯದ ಮಟ್ಟಕ್ಕೆ ಕರೆದುಕೊಂಡು ಹೋದುದನ್ನು ನಾವು ಮರೆಯಬಾರದು.
ವಿಶೇಷತೆಗಳು
| ISBN | - |
| ಭಾಷೆ | ಕನ್ನಡ |
| ಪುಟಗಳು | 444 |
| ಪ್ರಕಟಣೆ ವರ್ಷ | 2023 |
| ಆವೃತ್ತಿ | 1st |
| ತೂಕ | 850 ಗ್ರಾಂ |
| ಆಯಾಮಗಳು | - |





