ಅನುವಾದ
ಎಸ್. ಡಿ. ಬರ್ಮನ್ ಮತ್ತು ಅವರ ಸಂಗೀತದ ಪ್ರಪಂಚ
ಲೇಖಕ: ಅದಮಾರು ಶ್ರೀಪತಿ ಆಚಾರ್ಯ
₹340₹40015% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಸಂಗೀತವು ಸಂಗೀತಾಚಾರ್ಯ ಕುಮಾರ ಸಚಿನ್ ದೇವ್ ಬರ್ಮನ್‌ರ ಜಗತ್ತಿನ ಸಾರ ಸರ್ವಸ್ವವೂ ಆಗಿತ್ತೆನ್ನಬಹುದು. ಅವರ ಬದುಕಿನ ಎಲ್ಲ ಅಂಗಗಳೂ ಅವರು ಸೃಜಿಸಿದ ಸಂಗೀತದ ಪ್ರಪಂಚದೊಂದಿಗೆ ಶ್ರುತಿ ಮಾಡಲ್ಪಟ್ಟಿದ್ದವು. ಈ ಪುಸ್ತಕದಲ್ಲಿ ನಾನು ಸಂಗೀತದಲ್ಲಿನ ಅವರ ಬಹುಮುಖ ಪ್ರತಿಭೆ ಹಾಗೂ ಅದರ ಕೊಡುಗೆಯನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದ್ದೇನೆ. ಮತ್ತು ಈ ಪ್ರಕ್ರಿಯೆಯಲ್ಲಿ ಸಂಗೀತವು ಅವರ ಬದುಕನ್ನು ರೂಪಿಸಿದ ಬಗೆ ಹೇಗೆ ಎಂಬುದರ ಕುರಿತೂ ಒಂದು ಒಳನೋಟ ಬೀರಲು ಪ್ರಯತ್ನಿಸಿದ್ದೇನೆ. ನಾನು ಹೇಳಿ ಕೇಳಿ ಸಂಗೀತದ ಮಹಾಪಂಡಿತನೇನೂ ಅಲ್ಲ ಮತ್ತು ಕೇವಲ ನನ್ನ ಶ್ರವಣ ಸಾಮರ್ಥ್ಯದ ಮೇಲೆ ಅವಲಂಬಿಸಿಕೊಂಡು ಸಚಿನ್ - ಕರ್ತಾ ಅವರ ಸಂಗೀತವನ್ನು ಕುರಿತು ಚರ್ಚಿಸುವ ಸಾಹಸ ನನ್ನದು. ಈ ಪ್ರಯತ್ನದಲ್ಲಿ ನಾನು ಹಲವಾರು ಸೂಕ್ಷ್ಮ ಸಂಗತಿಗಳನ್ನು ಕೈಬಿಟ್ಟಿರಲೂ ಬಹುದು; ಅನೇಕ ತಪ್ಪುಗಳು ನನ್ನಿಂದ ಆಗಿರಬಹುದು. ಸಂಗೀತ ವಿದ್ವಾಂಸರು ಉದಾರ ಮನಸ್ಸಿನಿಂದ ಇವುಗಳನ್ನು ಮನ್ನಿಸಬೇಕೆಂದು ಕಳಕಳಿಯಿಂದ ವಿನಂತಿಸುತ್ತೇನೆ.
ಈ ಮಹಾನ್ ಸಂಗೀತಗಾರನ ಸಂಗೀತವನ್ನು ಕಾಲಾನುಕ್ರಮದಲ್ಲಿ ವಿಶ್ಲೇಷಿಸಿ ಇಂಗ್ಲಿಷ್ ಭಾಷೆಯಲ್ಲಿ ಹೊರತರುವುದರಲ್ಲಿ ಇದು ಮೊದಲನೆಯ ಪ್ರಯತ್ನ.
ಸಚಿನ್-ಕರ್ತಾರ ಸಂಗೀತವೆಂದರೆ ಅದು ಬದುಕಿಗೊಂದು ಅಮೃತ ಸೇಚನವಿದ್ದಂತೆ. ಅದು ನಮ್ಮ ಶರೀರ ಮತ್ತು ಮನಸ್ಸಿನೊಳಗೆ ಆಹ್ಲಾದಕರ ಕಂಪನವೊಂದನ್ನು ಪ್ರಚೋದಿಸುತ್ತದೆ; ಕೇಳುಗರ ಹೃದಯದ ಅಂತರಾಳದಲ್ಲಿ ಬಿರುಗಾಳಿ ಎಬ್ಬಿಸುತ್ತದೆ ಮತ್ತು ಅಲ್ಲಿ ಬದುಕಿನ ಸುಗಂಧ ಅನುರಣನಗೊಳ್ಳುವಂತೆ ಮಾಡುತ್ತದೆ. ಕೇಳಿದಷ್ಟೂ ಕೇಳಬೇಕೆನಿಸುವ ಅದರ ‘ಢ ಕಾತಿಯರ್ ಬನ್ಶಿ’ಯ (ಢಕಾಯಿತರ ಕೊಳಲು) ನಿನಾದ ಶ್ರೋತೃಗಳ ಹೃದಯವನ್ನು ಸೂರೆಗೊಳ್ಳುತ್ತದೆ. ಸಚಿನ್ ಅವರ ಸಂಗೀತದ ವಿಶೇಷತೆಯೆಂದರೆ ಅದು ಮೇಲು ಕೀಳು, ಬಡವ ಬಲ್ಲಿದರೆನ್ನದೆ ಎಲ್ಲರಲ್ಲೂ ಒಂದೇ ಪ್ರಕಾರವಾದ ಮಿಡಿತವುಂಟು ಮಾಡುತ್ತದೆ. ಸಚಿನ್ ಕರ್ತಾ ಅವರು ‘ರಾಗ’ಗಳ ಮೂಲಕ ಜಾನಪದ ಸಂಗೀತವನ್ನೂ ಜಾನಪದ ಸಂಗೀತದ ಮೂಲಕ ‘ರಾಗ’ಗಳನ್ನೂ ಪ್ರಸ್ತುತ ಪಡಿಸಿದರು. ಹೀಗೆ ಮಾಡುವಾಗ ಅವುಗಳೆರಡರಲ್ಲೂ ಯಾವುದೇ ವಿಕೃತಿಯನ್ನು ಉಂಟು ಮಾಡಲಿಲ್ಲ. ಬದಲಿಗೆ ಹಳ್ಳಿಗಾಡಿನ ಸಂಗೀತ ಮತ್ತು ನಗರ ಪ್ರದೇಶದ ಸಂಗೀತ ಇವೆರಡನ್ನೂ ಆಹ್ಲಾದಕರ ರೀತಿಯಲ್ಲಿ ಬೆಸೆದು ಅವುಗಳಲ್ಲಿ ಸಾಮರಸ್ಯವನ್ನು ಸಾಧಿಸಿದರು. ಸಚಿನ್ ಅವರ ಸಂಗೀತವನ್ನು ಬೇರೆಯವರ ಸಂಗೀತಕ್ಕಿಂತ ಭಿನ್ನವಾಗಿರಿಸಿರುವುದು ಅವರ ಸಂಗೀತದ ಈ ವಿಶಿಷ್ಟಶೈಲಿಯೇ. ಮಳೆ ನೀರಿನಲ್ಲಿ ತೊಯ್ದ ಮಣ್ಣಿನ ಕಂಪನ್ನು ಬೀರುವ ಅವರ ಸಂಗೀತವನ್ನು ಆಸ್ವಾದಿಸುವುದು ಸುಲಭ; ಆದರೆ ಅದನ್ನು ಅನುಕರಿಸುವುದು ತುಂಬಾ ಕಷ್ಟ. ಅವರ ಸಂಗೀತದಲ್ಲಿ ತುಂಬಿತುಳುಕುತ್ತಿರುವ ಮಾಧುರ್ಯ ಎಲ್ಲರನ್ನೂ ಆಕರ್ಷಿಸಬಲ್ಲುದು; ಇದು ಎಲ್ಲರೂ ಯಾವುದೇ ಸಂಕೋಚವಿಲ್ಲದೆ ಹಾಡಬಹುದಾದಂತಹ ಸಂಗೀತ. ಈ ಸಂಗೀತಕ್ಕೆ ಸಾವಿಲ್ಲ!
ಸಚಿನ್ ಅವರ ಸಮಕಾಲೀನರಾಗಿದ್ದ ಅನೇಕ ಸಂಗೀತಗಾರರು ಈಗಾಗಲೇ ಜನಮಾನಸದಿಂದ ಮರೆಯಾಗಿ ಹೋಗಿದ್ದಾರೆ. ಆದರೆ ಈಗಲೂ ಕೂಡಾ ಜನಸಾಮಾನ್ಯರನ್ನು ಮಂತ್ರಮುಗ್ಧರಾಗಿರಿಸಬಲ್ಲ ಬರ್ಮನ್‌ರ ಸಂಗೀತದಲ್ಲಿ ವಿಶೇಷವಾದದ್ದು ಅಂಥಾದ್ದೇನಿದೆ? ಇದಕ್ಕೆ ಉತ್ತರ ಇಷ್ಟೇ : ಅವರ ಸಂಗೀತದಲ್ಲಿ ‘ಜೀವನ’ ಇದೆ. ವಸಂತ ಕಾಲದಲ್ಲಿ ಪುಷ್ಪಭರಿತವಾದ ಮರದಿಂದ ನೆಲದ ಮೇಲೆ ಉದುರುವ ಹೂವಿನ ಪಕಳೆಗಳಂತೆ ಅವರ ಸಂಗೀತವು ನಮ್ಮ ಸಂವೇದನೆಗಳ ಮೇಲೆ ಪುಷ್ಪವೃಷ್ಟಿಗರೆಯುತ್ತದೆ. ನಮ್ಮೆಲ್ಲ ನೋವು ಮತ್ತು ಸಂಕಟಗಳನ್ನು ನಿವಾರಿಸಿ ಕೇಳುಗರ ಹೃದಯಾಂತರಾಳದಲ್ಲಿ ಆನಂದದ ಅನುಭೂತಿಯುಂಟು ಮಾಡುತ್ತದೆ. ರವೀಂದ್ರ ಸಂಗೀತದ ಹಾಗೆನೇ ಸಚಿನ್ ಅವರ ಸಂಗೀತವು ವಿಭಿನ್ನ ರೀತಿಯಲ್ಲಿ ಗುರುತಿಸಲ್ಪಡುವಂತಹುದು, ಅದಕ್ಕೆ ಅದರದೇ ಆದ ಪರಂಪರೆ ಇದೆ.
ಸಚಿನ್ ಕರ್ತಾರ ಬಗ್ಗೆ ಪುಸ್ತಕವೊಂದನ್ನು ಬರೆಯಬೇಕೆನ್ನುವುದು ನನ್ನ ಬಹುಕಾಲದ ಹಂಬಲವಾಗಿತ್ತು. ಈ ಪುಸ್ತಕದಲ್ಲಿ ನಾನು ಸಚಿನ್ ಅವರ ಬದುಕು ಮತ್ತು ಸಂಗೀತ ಇವೆರೆಡರ ನಡುವಿನ ಬಿಡಿಸಲಾರದ ನಂಟನ್ನು ಬೆಳಕಿಗೊಡ್ಡುವ ಪ್ರಯತ್ನವನ್ನಷ್ಟೇ ಮಾಡಿದ್ದೇನೆ. ಈ ಮಹಾನ್ ಸಂಗೀತಗಾರನ ಸಮಗ್ರಕೃತಿಗಳ ಖಜಾನೆಯನ್ನು ತೆರೆದು ನಾನು ನಡೆಸಿರುವ ಆಳವಾದ ಸಂಶೋಧನೆಗಳ ಆಧಾರದಲ್ಲೇ ಅವರ ಬದುಕಿನ ಚಿತ್ರಣ ನೀಡಲು ನಾನು ಯತ್ನಿಸಿದ್ದೆನೆ. ಅವರ ಜೀವನ ಚರಿತ್ರೆ ಮತ್ತು ಸಂಗೀತದ ಪ್ರಪಂಚದಲ್ಲಿ ಅವರು ಸಾಗಿದ ಪರಿ - ಇವೆರಡನ್ನೂ ದಾಖಲಿಸುವಲ್ಲಿ ನಾನು ಸಾಕಷ್ಟು ಯಶಸ್ವಿಯಾಗಿದ್ದೇನೆ ಎಂಬ ನಂಬಿಕೆ ನನ್ನದು.
ಸಚಿನ್ ದೇವ್ ಬರ್ಮನ್ ‘ಸರ್‌ಗಮೇರ್ ನಿಖಾದ್’ ಎಂಬ ತನ್ನ ಆತ್ಮಕಥನವನ್ನು ೧೯೭೦ರಲ್ಲಿ ಬರೆದರು ಮತ್ತು ಅದು ಬಂಗಾಳಿ ಪತ್ರಿಕೆ ‘ದೇಶ್’ ನಲ್ಲಿ ಪ್ರಕಟಿಸಲ್ಪಟ್ಟಿತು. ಹೆಚ್ಚುಕಡಿಮೆ ನಲವತ್ತು ವರ್ಷಗಳ ಕಾಲ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಬರ್ಮನ್ ಅವರ ಅಸಂಖ್ಯಾತ ಅಭಿಮಾನಿಗಳ ಆಶಯದಂತೆ ನಾನು ಈ ಪುಸ್ತಕದಲ್ಲಿ ‘ಸರ್‌ಗಮೇರ್ ನಿಖಾದ್’ನ ಬಹಳಷ್ಟು ಭಾಗಗಳನ್ನು ವಿಸ್ತೃತವಾಗಿ ಉಲ್ಲೇಖಿಸಿದ್ದೇನೆ.
ವಿಶೇಷತೆಗಳು
| ISBN | 978-93-81577-58-57 |
| ಭಾಷೆ | ಕನ್ನಡ |
| ಪುಟಗಳು | 340 |
| ಪ್ರಕಟಣೆ ವರ್ಷ | 2018 |
| ಆವೃತ್ತಿ | 3rd Edition |
| ತೂಕ | 650 ಗ್ರಾಂ |
| ಆಯಾಮಗಳು | - |





