ಮುಖ್ಯ ವಿಷಯಕ್ಕೆ ಹೋಗಿ (Skip to main content)
ಸಫಾ
ಹೊಸ ಬಿಡುಗಡೆ14% ರಿಯಾಯಿತಿ
ಅನುವಾದ

ಸಫಾ

ಲೇಖಕ: ಪ್ರಸಾದ್ ನಾಯ್ಕ್

₹300₹35014% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಯೋನಿಛೇದನ, ಬ್ರೆಸ್ಟ್ ಐರನಿಂಗ್, ಫೋರ್ಸ್ ಫೀಡಿಂಗ್... ಇವೆಲ್ಲದರಲ್ಲೂ ಕಾಣುವ ಸಾಮಾನ್ಯ ಅಂಶವೆಂದರೆ ಧರ್ಮ, ಸಂಪ್ರದಾಯ, ಪರಂಪರೆ, ಸಾಮಾಜಿಕ ಚೌಕಟ್ಟುಗಳ ಹೆಸರಿನಲ್ಲಿ ಹೆಣ್ಣುಮಕ್ಕಳ ಮೇಲೆ ಸತತವಾಗಿ ಎಸಗಲಾಗುತ್ತಿರುವ ಘೋರ ದೌರ್ಜನ್ಯ. ಯೋನಿಛೇದನದಲ್ಲಿ ಯೋನಿಯನ್ನು ಕತ್ತರಿಸಬೇಕೆಂದು ಧರ್ಮದ ಹೆಸರಿನಲ್ಲಿ ಬೋಧಿಸಲಾಗುತ್ತದೆ. ಬ್ರೆಸ್ಟ್ ಐರನಿಂಗ್‌ನಲ್ಲಿ ಹರೆಯದ ಮಗಳ ಎದೆಯಲ್ಲಿ ಮೂಡುತ್ತಿರುವ ಸ್ತನಗಳು ಅಕ್ಕಪಕ್ಕದ ಹುಡುಗರನ್ನು ಸೆಳೆಯದಂತೆ ಅವಳ ಮೊಲೆಗಳನ್ನೇ ವಿರೂಪಗೊಳಿಸಲಾಗುತ್ತದೆ. ಫೋರ್ಸ್ ಫೀಡಿಂಗ್‌ನಲ್ಲಿ ಧಡೂತಿ ದೇಹವೇ ಸೌಂದರ್ಯವೆಂಬ ತಲೆಬುಡವಿಲ್ಲದ ನಂಬಿಕೆಗೆ ಜೋತುಬಿದ್ದ ಸಮಾಜವೊಂದು ವಯಸ್ಕ ಪೈಲ್ವಾನರಿಗೆ ನೀಡಲಾಗುವ ಆಹಾರವನ್ನು ಏಳರ ಬಾಲೆಯ ಪುಟ್ಟ ಬಾಯಿಗೆ ಬಲವಂತವಾಗಿ ತುರುಕುತ್ತದೆ. ಹೀಗೆ ಹೆಣ್ಣುಮಕ್ಕಳ ದೇಹದಿಂದ ಹಿಡಿದು ಅವರ ಬದುಕು ಹೇಗಿರಬೇಕೆಂದು ಮತ್ಯಾರೋ ನಿರ್ಧರಿಸುತ್ತಾರೆ. ನಮ್ಮ ಸಮಾಜಗಳಲ್ಲಿ ವರದಿಯಾಗುವ ದೌರ್ಜನ್ಯಗಳದ್ದು ಒಂದು ತೂಕವಾದರೆ, ಈ ಬಗೆಯ ಅಧಿಕೃತವಾಗಿ ದಾಖಲಾಗದ ಅಪರಾಧಗಳದ್ದೇ ಬೆಚ್ಚಿ ಬೀಳಿಸುವಷ್ಟಿನ ತೂಕವಿದೆ. “ಯೋನಿಛೇದನದ ಸುತ್ತ ಜಾಣಮೌನದ ಸಂಸ್ಕೃತಿಯೊಂದು ಹುಟ್ಟಿಕೊಂಡಿದೆ. ಹೆಣ್ಣೊಬ್ಬಳು ಧೈರ್ಯವಾಗಿ ‘ನನಗೆ ಹೀಗಾಯಿತು’ ಎಂದರೆ ಜನರು ಆಕೆಯನ್ನು ವಿಚಿತ್ರವಾಗಿ ನೋಡಲಾರಂಭಿಸುತ್ತಾರೆ. ಆದರೆ ಯಾರಾದರೊಬ್ಬರು ಈ ಬಗ್ಗೆ ದನಿಯೆತ್ತಲೇಬೇಕು. ಇದನ್ನು ಹೀಗೆಯೇ ಮುಂದುವರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಬೇಕು. ಯೋನಿಛೇದನವು ನಿಸ್ಸಂದೇಹವಾಗಿ ಮಾನವ ಹಕ್ಕುಗಳ ವಿರುದ್ಧ ನಡೆಸಲಾಗುವ ಘೋರ ದೌರ್ಜನ್ಯ ಮತ್ತು ಇದನ್ನು ಕೊನೆಗಾಣಿಸುವುದು ನಮ್ಮ ತುರ್ತಾಗಲೇಬೇಕು” - ಜಹಾಂ ದುಕುರೆ (ಮಹಿಳಾ ಹಕ್ಕುಗಳ ಕಾರ್ಯಕರ್ತೆ)

ವಿಶೇಷತೆಗಳು

ISBN978-93-81244-88-3
ಭಾಷೆಕನ್ನಡ
ಪುಟಗಳು320
ಪ್ರಕಟಣೆ ವರ್ಷ2020
ಆವೃತ್ತಿ3rd Edition
ತೂಕ600 ಗ್ರಾಂ
ಆಯಾಮಗಳು-