ಮುಖ್ಯ ವಿಷಯಕ್ಕೆ ಹೋಗಿ (Skip to main content)
ಛತ್ರಪತಿ ಶಿವಾಜಿ (ಧರ್ಮಾತೀತ ಸೆಕ್ಯೂಲರ್ ರಾಜ)
ಹೊಸ ಬಿಡುಗಡೆ17% ರಿಯಾಯಿತಿ
ಅನುವಾದ

ಛತ್ರಪತಿ ಶಿವಾಜಿ (ಧರ್ಮಾತೀತ ಸೆಕ್ಯೂಲರ್ ರಾಜ)

ಲೇಖಕ: ರಾಹು

₹1,000₹1,20017% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಶಿವಾಜೀ ಒಬ್ಬ ಮಹಾಪ್ರಜಾಪ್ರಿಯ ರಾಜನಾಗಿದ್ದನು. ತನ್ನ ರಾಜ್ಯದ ಸರ್ವಧರ್ಮದವರನ್ನೂ ಸಮಭಾವದಿಂದ ಕಾಣುತ್ತಿದ್ದ ಶ್ರೇಷ್ಟ ಧರ್ಮಾತ್ಮನಾಗಿದ್ದನು. ಬಾಲ್ಯದಿಂದಲೂ ತನ್ನ ಮಾತಾಜೀ ಜೀಜಾಬಾಯಿಯವರ ನಿರ್ದೇಶನದಲ್ಲಿಯೇ ಬೆಳೆದು ದೊಡ್ಡವನಾಗಿದ್ದ ಶಿವಾಜಿಗೆ ಮಹಿಳೆಯರ ಬಗೆಗಿದ್ದ ಗೌರವಾದರಗಳು ಬೇಮಿಸಾಲ್ ಆಗಿದ್ದವು. ಒಬ್ಬ ಧರ್ಮಾತೀತ ಸೆಕ್ಯೂಲರ್ ಶೂರ ರಾಜನನ್ನು ಇಂದು ಒಬ್ಬ ಧರ್ಮಾಂಧನಂತೆ ಚಿತ್ರಿಸುತ್ತ ಹಿಂದೂ ಹೃದಯ ಸಾಮ್ರಾಟನೆಂದು ಬಹುಪರಾಕ್ ಹಾಕಿ ಹಾಡಿ ಹೊಗಳುತ್ತಿರುವವರ ಹೊಲಸು ಹುನ್ನಾರಗಳನ್ನು ನಾವಿಂದು ಅರ್ಥಮಾಡಿ-ಕೊಳ್ಳಬೇಕಾಗಿದೆ. ಅವನೊಬ್ಬ ರಾಜನಾಗಿದ್ದ ಅಷ್ಟೇ, ಉತ್ತಮ ರಾಜನಾಗಿದ್ದ, ಪ್ರತ್ಯುತ್ತಮ ರಾಜನಾಗಿದ್ದ. ಧರ್ಮಾಂಧತೆಯನ್ನು ಮೀರಿದ, ಸಂಕುಚಿತ ಮತಾಭಿಮಾನದ ಗಡಿಯಾಚೆಗೆ ವಿಹರಿಸುತ್ತಿದ್ದ ಶ್ರೇಷ್ಠ ರಾಜನಾಗಿದ್ದ. ಅವನ ಅನೇಕ ಆತ್ಮೀಯರು, ಆಪ್ತರು ಮುಸಲ್ಮಾನರಾಗಿದ್ದರು. ಅವನ ದಂಡು ಹಾಗೂ ದಂಡಾಧೀಶರಲ್ಲಿ ಅನೇಕ ಮುಸ್ಲೀಮರಿದ್ದರು. ಮುಸ್ಲಿಮ್ ರಾಜರ ಸಂಚಿನಿಂದ ಬಚಾಯಿಸಿ, ಶಿವಾಜಿಯ ಜೀವ ಉಳಿಸಿದ ಪ್ರಮುಖರೆಲ್ಲ ಮುಸ್ಲೀಮರೇ ಆಗಿದ್ದರು. ಪೋರ್ಚುಗೀಸರು ಮತ್ತು ಬ್ರಿಟಿಷರ ವಿರುದ್ಧ ತನ್ನ ಬಲವರ್ಧಿಸಿಕೊಳ್ಳುವ ಶಿವಾಜಿ ಬಹು ಜಾಣ್ಮೆಯಿಂದ ಒಂದು ಬಲಿಷ್ಠವಾದ ನೌಕಾಪಡೆಯನ್ನೂ ಕೂಡ ಕಟ್ಟಿದ್ದನು. ನಂಬಿವಿರಾ? ಆ ನೌಕಾಪಡೆಯ ಚೀಫ್ ಎಡ್ಮಿರಲ್ ಒಬ್ಬ ಮುಸಲ್ಮಾನನಾಗಿದ್ದನು. ತನ್ನ ತೋಪ್‌ಖಾನೆಗಳ ಜವಾಬ್ದಾರಿಯನ್ನು ಮುಸ್ಲೀಮರಿಗೆ ವಹಿಸಿಕೊಟ್ಟಿದ್ದ ಶಿವಾಜೀ ನಿಜಾರ್ಥದಲ್ಲಿ, ಒಬ್ಬ ಪ್ರಜಾವತ್ಸಲ ರಾಜನಾಗಿದ್ದನೆ ವಿನಾ, ಪರಧರ್ಮದವರ ಬಗೆಗಿನ ಸಂಶಯ ಪಿಶಾಚಿಗೆ ತನ್ನ ತಲೆಯಲ್ಲಿ ಸ್ಥಳ ಕೊಟ್ಟಿರಲಿಲ್ಲ. ಅಂತೆಯೇ ಅವನ ನಂಬಿಕೆಗೆ ನಿಷ್ಟರಾಗಿದ್ದ ಯಾವೊಬ್ಬ ಮುಸ್ಲಿಮ್ ಸೈನಿಕನೂ, ದಂಡಾಧೀಶನೂ ಶಿವಾಜಿಗೆ ದ್ರೋಹ ಬಗೆದಿರಲಿಲ್ಲ. ದ್ರೋಹ ಬಗೆದವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಅವನ ಸಂಬಂಧಿ ಆಪ್ತೇಷ್ಟರೇ ಆಗಿದ್ದರು. ಶಿವಾಜಿಯ ಬದುಕಿನುದ್ದಕ್ಕೂ ಅವನ ಜೀವ ಹಿಂಡಿ ಹಿಪ್ಪೆ ಮಾಡಿದವರು, ಅವಕಾಶ ಸಿಕ್ಕಾಗಲೆಲ್ಲ ಅವಮಾನಿಸಿ ಕುಗ್ಗಿಸಲು ಯತ್ನಿಸಿದ ಕುತ್ಸಿತಮತಿಗಳು ವೈದಿಕ ಪುರೋಹಿತರೇ ಆಗಿದ್ದರು. ಶಿವಾಜಿಯ ಪಟ್ಟಾಭಿಷೇಕಕ್ಕೆ ನೂರೆಂಟು ವಿಘ್ನಗಳನ್ನು ಒಡ್ಡಿದ ಪುಣೆಯ ಪುರೋಹಿತಶಾಹಿಯ ಅಂದಿನ ಪುಣೆಯ ಪುರೋಹಿತಶಾಹಿಯ ಇಂದಿನ ವಾರಸುದಾರರೇ ಚರಿತ್ರೆಯನ್ನು ತಿರುಚಿ ಶಿವಾಜಿಯನ್ನು ಒಬ್ಬ ಹಿಂದೂ ರಾಜನೆಂದು ಬಿಂಬಿಸಲು ಹೆಣಗುತ್ತಿದ್ದಾರೆ. ಈ ಕಹಿ ಸತ್ಯ ಮಹಾರಾಷ್ಟ್ರದ ಮರಾಠಾ ಮಹಾಜನಗಳಾದಿಯಾಗಿ ಸಕಲ ಹಿಂದುಳಿದ ದಲಿತ-ದಮನಿತ, ಅಲ್ಪ ಸಂಖ್ಯಾತರಿಗೆ ಮನದಟ್ಟಾಗಿದೆ. ಆದ್ದರಿಂದಲೇ ಇಡೀ ಭಾರತದ ಜನತೆ ಈಗ ಶಿವಾಜೀ ಮಹಾರಾಜನನ್ನು ಅಶೋಕ, ಅಕ್ಬರ್, ಟಿಪ್ಪು ಸುಲ್ತಾನನ ಸಾಲಿನಲ್ಲಿ ಬಹು ಹೆಮ್ಮೆಯಿಂದ ಗುರುತಿಸಿ ಗೌರವಿಸುತ್ತಿದ್ದಾರೆ.

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು1004
ಪ್ರಕಟಣೆ ವರ್ಷ2023
ಆವೃತ್ತಿ1st
ತೂಕ1500 ಗ್ರಾಂ
ಆಯಾಮಗಳು-