ಅನುವಾದ
ಭಾಮಾ : ದಲಿತ ಪ್ರಜ್ಞೆ
ಲೇಖಕ: ಡಾ. ಎಚ್.ಎಸ್. ನಾಗಭೂಷಣ
₹170₹20015% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಬಾಮಾ ಅವರ ಸಾಹಿತ್ಯದ ಆಶಯ ಹಾಗು ಧೋರಣೆಗಳನ್ನು ವಿಶ್ಲೇಷಿಸುವ ‘ಬಾಮಾ: ದಲಿತ ಪ್ರಜ್ಞೆ’(ಮೂಲ: ಆರ್.ಕೆ.ಧವನ್ ಮತ್ತು ಸುನಿತಾ ಪುರಿ; ಅನು: ಎಚ್.ಎಸ್ ನಾಗಭೂಷಣ) ಎನ್ನುವ ಪುಸ್ತಕವು ಪ್ರಸ್ತುತ ಸಂದರ್ಭದಲ್ಲಿ ಸಾಮಯಿಕವಾಗಿದೆ ಎಂದು ಭಾವಿಸುತ್ತೇನೆ. ಇಂದು ದಲಿತ ಸಾಹಿತ್ಯ ಮತ್ತು ಅದರ ಉತ್ತರೋತ್ತರ ಚರ್ಚೆಗಳು ಸಮಕಾಲೀನ ಸಾಹಿತ್ಯ ಮತ್ತು ಸಂಸ್ಕೃತಿ ಸಂದರ್ಭಗಳಲ್ಲಿ ನಡೆಯುತ್ತಿದೆ. ಅವುಗಳಲ್ಲಿ ಇಂದು ಅಂಬೇಡ್ಕರ್ ನಂತರ ಭಾರತೀಯ ಚರಿತ್ರೆಯಲ್ಲಿ ದಲಿತ ಎನ್ನುವ ಐಡಿಯಾಲಾಜಿಯ ಬೆಳವಣಿಗೆಯನ್ನು ಗಮನಿಸಲೇಬೇಕಾದ ಅಗತ್ಯವೂ ಉಂಟಾಗಿದ್ದು ದಲಿತ ಎನ್ನುವ ಅಸ್ಮಿತೆಯನ್ನು ರಾಜಕೀಯ, ಸಾಮಾಜಿಕ ಹಾಗು ಸಾಂಸ್ಕೃತಿಕ ಸಂದರ್ಭಗಳಲ್ಲಿ ಪುನಾ ವಿವರಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಈ ದೃಷ್ಟಿಯಿಂದ ನೆರೆನಾಡಿನ ದಲಿತ-ಸ್ತ್ರೀ ಬರಹಗಾರರಾದ ಬಾಮಾ ಅವರ ಸಾಹಿತ್ಯವನ್ನು ವಿಶ್ಲೇಷಣೆಗೆ ಒಳಪಡಿಸುವುದು ಪ್ರಸ್ತುತ ಎನಿಸುತ್ತದೆ. ಇಂಗ್ಲಿಷಿನಲ್ಲಿ ರೀಡರ್ ಮತ್ತು ರೈಟರ್ ಸರಣಿಗಳನ್ನು ನಿರೂಪಿಸುವ ಪರಂಪರೆ ಇದೆ. ಅದು ಓದಿನ ಒಂದು ಕ್ರಮವಾಗಿದ್ದು, ಒಬ್ಬ ಲೇಖಕ/ಕಿಯ ಕೃತಿಗಳನ್ನು ವಿವಿಧ ತತ್ವಗಳ ಹಿನ್ನೆಲೆಯಲ್ಲಿ, ಅನೇಕ ಸಮಕಾಲೀನ ದೃಷ್ಟಿಕೋನಗಳ ಹಿನ್ನೆಯಲ್ಲಿ ಓದುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಇದರಿಂದ ಒಬ್ಬ ಓದುಗ ಬರಹಗಾರ/ಗಾರ್ತಿಯ ಕೃತಿಗಳನ್ನು ತಲಸ್ಪರ್ಶಿಯಾಗಿ ಅರಿಯುವ ಅವಕಾಶಗಳು ಉಜ್ವಲವಾಗಿರುತ್ತದೆ. ಈ ದಿಸೆಯಲ್ಲಿ ಕನ್ನಡದ ಓದುಗರಿಗೆ ಬಾಮಾ ಅವರ ಸಾಹಿತ್ಯವನ್ನು ಇಂಗ್ಲಿಷಿನಲ್ಲಿ ಮಾಡಿದ ಓದುಗಳನ್ನು ನೀಡುವ ಪ್ರಯತ್ನವನ್ನು ಅನುವಾದದ ಮೂಲಕ ಎಚ್.ಎಸ್.ನಾಗಭೂಷಣ ಅವರು ಮಾಡಿರುವ ಪ್ರಯತ್ನ ಸ್ವಾಗತಾರ್ಹವಾದುದು.
ಬಾಮಾ ಅವರ ಬರಹಗಳ ಕುದಿವ ಬಿಂದು ಇರುವುದು ಅಸ್ಮಿತೆಗಳ ರಾಜಕೀಕರಣದಲ್ಲಿ. ಬಾಮಾ ಅವರ ಸಾಹಿತ್ಯವನ್ನು ‘ದಲಿತ’ ಅಥವಾ ‘ಸಬಾಲ್ಟ್ರನ್’ ಹೆಸರಿನಲ್ಲಿ ಗುರುತಿಸಲಾಗುತ್ತದೆ. ಸಬಾಲ್ಟ್ರನ್ ಎನ್ನುವ ಪದವು ಶೋಷಿತರ, ದಮನಿತರ ನೆಲೆಯಿಂದ ಹೊಮ್ಮುವ ದೃಷ್ಟಿಕೋನವನ್ನು ಸೂಚಿಸುತ್ತದೆ. ಮೇಲ್ನೋಟಕ್ಕೆ ಈ ಪದವು ಸೂಚಿಸುವ ಗುಂಪುಗಳಲ್ಲಿ ಶೋಷಣೆಗೀಡಾದವರು ಎಂಬ ಸ್ಥೂಲಾರ್ಥವು ಕಾಣುತ್ತದೆ. ಆದರೆ ಸಬಾಲ್ಟ್ರನ್ ಅಸ್ಮಿತೆ ಯಾರಿಗೆಲ್ಲಾ ಸಲ್ಲುತ್ತದೆ? ಎನ್ನುವುದನ್ನು ಗುರುತಿಸಿಕೊಳ್ಳುವುದೇ ಸಮಸ್ಯೆ. ಅಲ್ಲದೆ ಸಬಾಲ್ಟ್ರನ್ ಎನ್ನುವ ಅಸ್ಮಿತೆಯೊಳಗೇ ಅನೇಕ ಸಬ್-ಸಬಾಲ್ಟ್ರನ್ ಅಸ್ಮಿತೆಗಳು ಇರಬಹುದಾದ ಸಾಧ್ಯತೆಗಳಿದ್ದು ಅವುಗಳನ್ನು ಒಟ್ಟಾರೆ ಸಬಾಲ್ಟ್ರನ್ ಎನ್ನುವ ಅಸ್ಮಿತೆಯಡಿಯಲ್ಲಿ ಚರ್ಚಿಸಬಹುದೇ ಎನ್ನುವ ಸಂದಿಗ್ಧವೂ ಉಂಟಾಗುತ್ತದೆ. ಆದುದರಿಂದಲೇ ಸಬಾಲ್ಟ್ರನ್ ಎನ್ನುವ ಮಾನದಂಡವನ್ನು ಬಾಮಾ ಅವರ ಸಾಹಿತ್ಯಕ್ಕೆ ಅನ್ವಯಿಸಿ ನೋಡುವಾಗ ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಸಬಾಲ್ಟ್ರನ್ ತತ್ವದ ಸಾರ್ವತ್ರಿಕ ಗುಣಲಕ್ಷಣಗಳನ್ನು ಮೀರಿದ ಅನನ್ಯತೆಯು ಬಾಮಾ ಅವರಲ್ಲಿ ಇರಬಹುದೇ ಎನ್ನುವ ಅಂಶವನ್ನು ಸಹ ಗಮನಿಸಬೇಕಾಗುತ್ತದೆ.
ಬಾಮಾ ಅವರು ತಮ್ಮ ಸಾಹಿತ್ಯದಲ್ಲಿ ಮೇಲಿಂದ ಮೇಲೆ ಎತ್ತುವ ಶೋಷಣೆಯ ಸ್ವರೂಪವು ಅನೇಕ ಅಸ್ಮಿತೆಗಳಲ್ಲಿ ಹರಡಿಕೊಂಡಿದೆ. ಬಾಮಾ ಅವರಲ್ಲಿ ಸಂದಿಗ್ಧಮಯವಾದ ಅಸ್ಮಿತೆಗಳಿದ್ದು ಅವು ಸಂಕರಗೊಂಡ ಅಸ್ಮಿತೆಗಳಾಗಿವೆ. ಬಾಮಾ ಅವರಲ್ಲಿ ದಲಿತ, ಸ್ತ್ರೀ, ದಲಿತ-ಸ್ತ್ರೀ, ದಲಿತ-ಕ್ರಿಶ್ಚಿಯನ್ ಹೀಗೆ ಅನೇಕ ಅಸ್ಮಿತೆಗಳು ಒಟ್ಟಿಗೇ ಕೆಲಸ ಮಾಡುತ್ತವೆ. ಈ ಅಸ್ಮಿತೆಗಳು ಯಾವುವೂ ಶುದ್ಧಾಂಗವಾಗಿ ಒಂದು ಅಸ್ಮಿತೆಯ ಗುಣಲಕ್ಷಣಗಳನ್ನು ಪೋಷಿಸುವಂತವಲ್ಲ. ಅವುಗಳಲ್ಲಿರುವ ಹಲವುತನಗಳು ಒಮ್ಮೆಗೇ ಅನೇಕ ಐಡಿಯಾಲಾಜಿಗಳನ್ನು ಎಳೆದುಕೊಳ್ಳುತ್ತವೆ. ಇದು ಏಕಕಾಲಕ್ಕೆ ಅನುಕೂಲವೂ ಅನನುಕೂಲವೂ ಆಗಿ ಪರಿಣಮಿಸುತ್ತವೆ. ಒಂದು ಕಡೆಯಿಂದ ಬಾಮಾ ಅವರ ಸಾಹಿತ್ಯದೊಳಗೆ ವ್ಯಕ್ತವಾಗಿರುವ ಯಾವುದಾದರೊಂದು ಅಸ್ಮಿತೆಯನ್ನು ಇಟ್ಟುಕೊಂಡು ಚರ್ಚೆ ಮಾಡಬಹುದಾದ ಅನುಕೂಲ; ಇನ್ನೊಂದು ಕಡೆಯಿಂದ ಘಟಕಗಳನ್ನು ಮಾತ್ರ ಫೋಕಸ್ ಮಾಡುವ ಮೂಲಕ ಬಾಮಾರ ಸಾಹಿತ್ಯವನ್ನು ಆಂಶಿಕವಾಗಿ ಮಾತ್ರ ಗಮನಿಸಿ ಸಮಗ್ರತೆಯಿಂದ ದೂರವುಳಿಯುವುದು.
ವಿಶೇಷತೆಗಳು
| ISBN | 978-93-81244-62-3 |
| ಭಾಷೆ | ಕನ್ನಡ |
| ಪುಟಗಳು | 200 |
| ಪ್ರಕಟಣೆ ವರ್ಷ | 2016 |
| ಆವೃತ್ತಿ | 5th EDITION |
| ತೂಕ | 350 ಗ್ರಾಂ |
| ಆಯಾಮಗಳು | - |





