ಅನುವಾದ
ಅನಿರೀಕ್ಷಿತ ಕಥೆಗಳು ರೊಆಲ್ಡ್‌ದಾಹ್ಲ್ (ಸಣ್ಣಕಥೆಗಳು)
ಲೇಖಕ: ಜೆ.ವಿ. ಕಾರ್ಲೊ
₹210₹2309% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಇಂಗ್ಲಿಷ್ ಸಣ್ಣಕತೆಗಾರರೊ ಆಲ್ಡ್‌ದಾಹ್ಲ್ ಅನಿರೀಕ್ಷಿತ ರೀತಿಯಲ್ಲಿ ಓದುಗರನ್ನು ವಿಸ್ಮಯಗೊಳಿಸುವ, ರೋಮಾಂಚನಗೊಳಿಸುವ ಲೇಖಕ. ಅವನ ಕತೆಗಳು ಊಹಿಸಲಾಗದ ರೀತಿಯಲ್ಲಿ ಕೊನೆಗೊಳ್ಳುತ್ತವೆ. ಅದಷ್ಟೇ ಆಗಿದ್ದರೆ ದಾಹ್ಲ್‌ನನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿರಲಿಲ್ಲ. ಅನಿರೀಕ್ಷಿತ ಅಂತ್ಯವನ್ನು ಕೊಡುವ ಕತೆಗಾರರು/ಕತೆಗಾರ್ತಿಯರು ಜಾಗತಿಕ ಕಥಾಲೋಕದಲ್ಲಿ ಬಹಳಷ್ಟಿದ್ದಾರೆ. ಕತೆಗೆ ಆಯ್ದುಕೊಳ್ಳುವ ವಸ್ತು ಮತ್ತು ಅದನ್ನು ಕಟ್ಟುವಿಕೆ, ಕುತೂಹಲಕ್ಕೆ ಎಲ್ಲೂ ಊನವಾಗದಂತೆ ಅದನ್ನು ಬೆಳೆಸುವ ರೀತಿ, ಒಂದು ಸಣ್ಣಆತಂಕ, ಉದ್ವೇಗವನ್ನು ಕಾಯ್ದುಕೊಂಡು ಬರುವ ಶೈಲಿ ಅವನದೇ ಆಗಿದೆ. ದಾಹ್ಲನ ಈ ಶೈಲಿ ಪತ್ತೆದಾರಿ ಕತೆಗಳಿಗೆ ಹತ್ತಿರದ್ದಾದರೂ ಅದು ಏನನ್ನಾದರೂ ಪತ್ತೆಮಾಡುವ ಅಂಶವನ್ನು, ಉದ್ದೇಶವನ್ನು ಒಳಗೊಂಡಿಲ್ಲ. ಓದುಗರನ್ನು ದಿಗ್ಭ್ರಮೆಗೆ ದೂಡುವ, ಚಿಕಿತರನ್ನಾಗಿ ಮಾಡುವ ಆಶಯವಷ್ಟೇ ಅದಕ್ಕಿದೆ. ಇದನ್ನು ಜನಪ್ರಿಯವಾಗಿ ಬರೆಯಲೆತ್ನಿಸುವ ಎಲ್ಲ ವೃತ್ತಿ ಬರಹಗಾರರೂ ಅನುಸರಿಸುತ್ತಾರೆ. ಹಾಗಾಗಿ, ದಾಹ್ಲನ ಕತೆಗಳಿಗೆ ವೃತ್ತಿಪರತೆಯ ಭಾಗವಾಗಿರುವ ಜನರನ್ನು ಮುಟ್ಟುವ ತುರ್ತೂ ಸೇರಿಕೊಂಡಿದೆ. ಇಲ್ಲಿ ಅಚ್ಚಾಗಿರುವ ೧೩ ಕತೆಗಳನ್ನು ತುಸು ಗಮನವಿಟ್ಟು ನೋಡಿದರೆದಾಹ್ಲನ ಕಥನ ಕುಶಲತೆ ಮತ್ತು ವಿಶಿಷ್ಟ ಕಸುಬುದಾರಿಕೆಯ ಪರಿಚಯ ಓದುಗರಿಗೆ ಆಗುತ್ತದೆ.
ವಿಶೇಷತೆಗಳು
| ISBN | - |
| ಭಾಷೆ | ಕನ್ನಡ |
| ಪುಟಗಳು | 204 |
| ಪ್ರಕಟಣೆ ವರ್ಷ | 2024 |
| ಆವೃತ್ತಿ | 1st |
| ತೂಕ | 425 ಗ್ರಾಂ |
| ಆಯಾಮಗಳು | - |





