ಮುಖ್ಯ ವಿಷಯಕ್ಕೆ ಹೋಗಿ (Skip to main content)
ಪ್ರಶಾಂತ ನೀಲಾಕಾಶ
ಹೊಸ ಬಿಡುಗಡೆ20% ರಿಯಾಯಿತಿ
ಅನುವಾದ

ಪ್ರಶಾಂತ ನೀಲಾಕಾಶ

ಲೇಖಕ: ಉಷಾಶ್ರೀ ಎಸ್.

₹400₹50020% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಚೀನಾದ ಲೇಖಕಿ. ೧೯೬೩ರಲ್ಲಿ ಜನನ. ಬೀಜಿಂಗ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದ ಈಕೆ ಮುಂದೆ ವಿದ್ಯಾರ್ಥಿವೇತನ ಪಡೆದು ಲಂಡನ್ನಿನ ಆಕ್ಸ್‌ಫರ್ಡ್ ಯೂನಿವರ್ಸಿಟಿಯಲ್ಲಿ ಎಂ. ಫಿಲ್ ಮಾಡಿರುತ್ತಾರೆ. ಪ್ರಸ್ತುತ ಚಲನಚಿತ್ರ ಮತ್ತು ಡಾಕ್ಯುಮೆಂಟರಿ ನಿರ್ಮಾಪಕರಾಗಿ ಬಿಬಿಸಿ ಚಾನೆಲ್-೪, ಪಿಬಿಎಸ್ ಮತ್ತು ಡಿಸ್ಕವರಿ ಚಾನೆಲ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸನ್-ಶುಯುನ್, ಚೀನಾದ ‘ಸಾಂಸ್ಕೃತಿಕ ಕ್ರಾಂತಿ’ಯ ಕಾಲಘಟ್ಟದಲ್ಲಿ ಹುಟ್ಟಿ ಬೆಳೆದು ಬಂದ ಹುಡುಗಿ. ಶಾಲೆಯಲ್ಲಿ, ರಸ್ತೆಯಲ್ಲಿ, ಮನೆಯಲ್ಲಿ, ಹೀಗೆ ಇಡೀ ಚೀನಾದಲ್ಲಿ ಮಾವೋನ ಆಶಯಗಳನ್ನೇ ತುಂಬುತ್ತಿದ್ದ ಕಾಲವದು. ಧರ್ಮ, ನಂಬಿಕೆಗಳನ್ನು ಬದಿಗೊತ್ತಿ ಪ್ರಕೃತಿ ಮತ್ತು ಮಾನವ-ಶಕ್ತಿಯನ್ನು ತಮ್ಮ ಉಪಯೋಗಕ್ಕೆ ಒಗ್ಗಿಸಿ, ಬಗ್ಗಿಸಿಕೊಳ್ಳುವ ಕಮ್ಯುನಿಸ್ಟ್ ವಾತಾವರಣದಲ್ಲಿ, ಸನ್ ಶುಯುನ್ ತನ್ನ ಅಜ್ಜಿಯೊಂದಿಗೇ ಬೆಳೆದು ಬಂದಾಕೆ. ಪ್ರತಿ ರಾತ್ರಿ, ಎಲ್ಲರೂ ಮಲಗಿದ ಮೇಲೆ ಇವರ ಕೋಣೆಯಲ್ಲಿ ದೇಶದೆಲ್ಲೆಡೆಯೂ ನಿಷೇಧಿಸಲ್ಪಟ್ಟ ಬೌದ್ಧ ಸ್ತೋತ್ರಗಳನ್ನು ಜಪಿಸುವ, ಜಾತಕ ಕತೆಗಳನ್ನು ಹೇಳುವ ಅಜ್ಜಿಯು ಸನ್‌ಳ ಬಾಲ್ಯದ ಮತ್ತೊಂದು ಮಗ್ಗುಲು. ಮುಂದೆ, ವಿಶ್ವವಿದ್ಯಾಲಯಕ್ಕೆ ತೆರಳುವ ವೇಳೆಗೆ ಸನ್-ಶುಯುನ್ ತನ್ನ ತಂದೆಯ ಮತ್ತು ಅವನ ಕಾಮ್ರೇಡುಗಳ ಕಮ್ಯುನಿಸಂ ಮೇಲಿನ ಭ್ರಮನಿರಸನವನ್ನು ಕಾಣುತ್ತಾರೆ. ಅವರ ಎಲ್ಲಾ ಆದರ್ಶಗಳನ್ನು ಈಡೇರಿಸುವಲ್ಲಿ ಕಮ್ಯುನಿಸಂ ಸೋತಿರುತ್ತದೆ. ತಮ್ಮ ಮುಂದಿನ ನಂಬಿಕೆ, ಆದರ್ಶಗಳನ್ನು ‘ಸನ್’ ಪ್ರಶ್ನಿಸಿಕೊಳ್ಳುತ್ತಾರೆ. ಇಡೀ ಚೀನಾದ ಯುವ ಜನತೆ ಇದನ್ನು ಪ್ರಶ್ನಿಸಿಕೊಳ್ಳುವ ಸಮಯ. ಅದೇ ವೇಳೆಗೆ ವಿದ್ಯಾರ್ಥಿ ವೇತನ ಪಡೆದು ಇವರು ತಮ್ಮ ಸ್ವದೇಶ ತೊರೆದು ಇಂಗ್ಲೆಂಡಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳುತ್ತಾರೆ. ಅಲ್ಲಿ ಇವರಿಗೆ ಮೊದಲ ಬಾರಿಗೆ ಚೀನಾದ ನಿಜವಾದ ಆದರ್ಶ ನಾಯಕನ ಜನಪ್ರಿಯತೆ ಎಷ್ಟೆಂದು ಪರಿಚಯವಾಗುತ್ತದೆ. ಅವನೇ ಹುಯೆನ್-ತ್ಸಾಂಗ್! ಈತ ಚೀನಾದ ಪ್ರಕ್ಷುಬ್ಧತೆ ಮತ್ತು ಸುವರ್ಣಯುಗ ಎರಡನ್ನೂ ಕಂಡಿರುವಾತ. ಅವನ ಅದ್ವಿತೀಯ ಸಾಧನೆ ಮತ್ತು ಬೆಂಬಿಡದ ಶ್ರಮ ಇಡೀ ಚೈನಾ ಚಕ್ರಾಧಿಪತ್ಯದಲ್ಲಿ ಧರ್ಮದ ಪುನರ್-ನಂಬಿಕೆಯನ್ನು ಪ್ರೇರೇಪಿಸುವುದು. ಅವನಿಗೆ ಇಂಥ ಅಗಾಧ ಸಾಧನೆಗೆ ಅಗತ್ಯವಿದ್ದ ಎಲ್ಲಾ ಶಕ್ತಿ ಮತ್ತು ಗುರಿಗಳನ್ನು ಪ್ರೇರೇಪಿಸಿದ ನಂಬಿಕೆ ಅದಾವುದು? ತನ್ನಲ್ಲೂ ಆ ನಂಬಿಕೆ ಇದೆಯೇ? ಎಂದು ಪ್ರಶ್ನಿಸಿಕೊಳ್ಳುವ ಸನ್-ಶುಯುನ್, ತಾನೂ ಸಹ ಆತನು ಸಾಗಿ ಬಂದ ಹಾದಿಯನ್ನೇ ಅನುಸರಿಸಿ ಚೀನಾದಿಂದ, ಪುರಾತನ ಸಿಲ್ಕ್-ರೋಡಿನ ಜಾಡು ಹಿಡಿದು ಮಧ್ಯ ಏಶಿಯಾದ ಮೂಲಕ ಇಂಡಿಯಾಕ್ಕೆ ಬಂದು, ಇಲ್ಲಿ ತಿರುಗಾಡಿ ಹಿಂದಿರುಗಿ ಚೈನಾ ಸೇರುವ ಅನುಭವದ ಕಥಾನಕವೇ ಈ ಪುಸ್ತಕ. ಇಂಡಿಯಾದಲ್ಲಿ ತಾನು ಭೇಟಿಯಿತ್ತ ಪ್ರತಿ ಸ್ಥಳದಲ್ಲೂ ‘ಸನ್-ಶುಯುನ್’ ಓದುಗರನ್ನು ಕಾಲದ ಜೋಕಾಲಿಯೊಳಗಿಟ್ಟು ವಿವಿಧ ಮಜಲುಗಳಿಗೆ ತೂಗುತ್ತಾರೆ. ಸನ್ ಪ್ರವಾಸ ಕಥನವು ಬುದ್ಧನ ಕಾಲದಿಂದ ಹಿಡಿದು, ಇಂಡಿಯಾ ಮತ್ತು ಚೀನಾದ ವಿವಿಧ ಕಾಲಘಟ್ಟದ ಚರಿತ್ರೆಯ ಪುಟಗಳನ್ನು ಕಂಡು, ಸನ್ ಮತ್ತವರ ಅಜ್ಜಿಯ ಕಾಲವನ್ನೂ ಎಡೆತಾಕಿ, ಸಿಲ್ಕ್ ರಸ್ತೆಯ ಮರಳು-ಗಾಳಿಗೆ ನಮ್ಮನ್ನು ಒಡ್ಡಿಕೊಳ್ಳುವಂತೆ ಮಾಡುತ್ತದೆ. ಇದು ವಿವಿಧ ಸಂಸ್ಕೃತಿಯ, ಗತಿಸಿದ ಯುದ್ಧಗಳ, ನಾವು ಕಂಡು ಕೇಳರಿಯದ ಚೀನೀ ಚರಿತ್ರೆಯನ್ನು ಬುದ್ಧಚರಿತೆಯ ಹಿಮ್ಮೇಳದಲ್ಲಿ ನುಡಿಸುತ್ತದೆ. ಸನ್ ಶುಯುನ್ ಅವರ ಶೈಲಿಯ ವೈಶಿಷ್ಟ್ಯ ಇದು. ***

ವಿಶೇಷತೆಗಳು

ISBN978-93-81244-99-978-
ಭಾಷೆಕನ್ನಡ
ಪುಟಗಳು476
ಪ್ರಕಟಣೆ ವರ್ಷ2021
ಆವೃತ್ತಿ1st
ತೂಕ800 ಗ್ರಾಂ
ಆಯಾಮಗಳು-