ಅನುವಾದ
ಇಲಿ ಮನುಷ್ಯ
ಲೇಖಕ: ಜೆ.ವಿ. ಕಾರ್ಲೊ
₹200₹25020% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಈ ಕತೆಗಳೂ ಒಂದು ರೀತಿಯಲಿ ಆಧುನಿಕ ಜನಪದವನ್ನು, ಪುರಾಣವನ್ನು ಸೃಷ್ಟಿಸಬಲ್ಲವು. ಇಂತಹ ಕೆಲಸವನ್ನು ನಮ್ಮ ಸಿನಿಮಾಗಳು, ಚಿತ್ರಕತೆಗಳ ಪುಸ್ತಕಗಳು, ಧಾರಾವಾಹಿಗಳು ಈ ತನಕ ಮಾಡಿಕೊಂಡೇ ಬಂದಿವೆ. ಒಂದು ಸುಸಂಬದ್ಧ ನಿರೂಪಣೆಗೆ ನಮ್ಮನ್ನು ಒಗ್ಗಿಸಿವೆ, ಬಗ್ಗಿಸಿವೆ. ಹಾಗಾಗಿ, ಆಧುನಿಕಕತೆ ಹೇಳುವ ರೀತಿಅಥವಾ ಮಾದರಿಯೊಂದು ಈಗಾಗಲೇ ಸ್ಪಷ್ಟವಾಗಿ ರೂಪುಗೊಂಡಿದೆ. ಅದರ ಮುಂದುವರಿಕೆಯಾಗಿ ದಾಹ್ಲ್‌ನ ಕತೆಗಳಿವೆ. ಆಧುನಿಕ ಪುರಾಣ ರಾಜಕೀಯದಲ್ಲಿ ಮತ್ತು ಸಮಾಜದಲ್ಲಿ ಪ್ರತಿನಿತ್ಯ ಸಂಭವಿಸುತ್ತಲೇ ಇರುತ್ತದೆ. ನಾವು ಬದುಕುತ್ತಿರುವ ವರ್ತಮಾನ ವಾಸ್ತವವೂ ಹೌದು ಪುರಾಣವೂ ಹೌದು. ನಾವು ಕಾಣಲಾಗದ ಅಂತಹ ಘಟನೆಗಳನ್ನೇ ದಾಹ್ಲ್‌ತನ್ನ ಕತೆಗಳಲ್ಲಿ ಕಣ್ಣಿಗೆ ಕಟ್ಟುವಂತೆ ಎದುರಿಗಿಟ್ಟಿದ್ದಾನೆ. ಅವನ ಕತೆಗಳಲ್ಲಿ ಕತೆಯ ನಿರೂಪಣೆ, ಮತ್ತದರ ಪರಿಣಾಮ ಮುಖ್ಯವಾಗುತ್ತದೆಯೇ ಹೊರತು, ಬದುಕಿನ ಕಾಣಿಸುವಿಕೆ ಅಥವಾ ಕಾಣ್ಕೆ ಅಲ್ಲ. ಕುತೂಹಲ, ರೋಮಾಂಚನದ ಅಂಶಗಳು ಮುಖ್ಯವಾಗಿದ್ದ ಕಡೆ ಕಾಣ್ಕೆ ಇರುವುದು ಕಡಿಮೆ. ಇಲ್ಲವೇ ಕಾಣ್ಕೆ ಕಣ್ಣಿಗೆ ಕಾಣದಂತೆ ಮೊದಲೇ ಕಾಣೆಯಾಗಿರುತ್ತದೆ. ಹಾಗಾಗಿ, ಇವು ಓದಿಗಾಗಿ ನಾಳೆಯೂ ಉಳಿಯಬಹುದಾದ ಕತೆಗಳು; ಓದುಗರಲ್ಲೇ ಉಳಿದು ಬೆಳೆಯುವ ಕತೆಗಳಲ್ಲ.
ವಿಶೇಷತೆಗಳು
| ISBN | - |
| ಭಾಷೆ | ಕನ್ನಡ |
| ಪುಟಗಳು | 220 |
| ಪ್ರಕಟಣೆ ವರ್ಷ | 2025 |
| ಆವೃತ್ತಿ | 1st |
| ತೂಕ | 350 ಗ್ರಾಂ |
| ಆಯಾಮಗಳು | Book Size : 1/4 Crown(23x15.5) (International Standard Book Size) |





