ಮುಖ್ಯ ವಿಷಯಕ್ಕೆ ಹೋಗಿ (Skip to main content)
ದಿ ಕಾಲ್ ಆಫ್ ದಿ ವೈಲ್ಡ್
ಹೊಸ ಬಿಡುಗಡೆಬೆಸ್ಟ್ ಸೆಲ್ಲರ್20% ರಿಯಾಯಿತಿ
ಅನುವಾದ

ದಿ ಕಾಲ್ ಆಫ್ ದಿ ವೈಲ್ಡ್

ಲೇಖಕ: ಜೆ.ವಿ. ಕಾರ್ಲೊ

₹208₹26020% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಮನಸಿಗೆ ಆಪ್ತರಾದ ಲೇಖಕರಲ್ಲೇ ಜಾಕ್ ಲಂಡನ್ ಹಾಗೂ ಕ್ಯಾಥರಿನ್ ಆನ್ನ್ ಪೋರ್ಟರ್ ಬಗ್ಗೆ ತುಸು ಹೆಚ್ಚೇ ವ್ಯಾಮೋಹ. ಜಾಕ್ ಲಂಡನ್ ಅಮೆರಿಕದ ಕಾದಂಬರಿಕಾರ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ. ಕಮರ್ಷಿಯಲ್ ಫಿಕ್ಷನ್, ಸೈನ್ಸ್ ಫಿಕ್ಷನ್ ಎಂಬ ಪರಿಕಲ್ಪನೆ ಹುಟ್ಟಿಗೂ ಮೊದಲೇ ಆ ಪ್ರಕಾರಗಳಲ್ಲಿ ಕ್ರಿಯಾಶೀಲನಾಗಿದ್ದವ. ಲೇಖನಿಯಿಂದಲೇ ಅದೃಷ್ಟಗಿಟ್ಟಿಸಿಕೊಂಡ ಮಹಾನುಭಾವ. ಬರವಣಿಗೆಗಾಗಿ ಬದುಕನ್ನ ಪ್ರಯೋಗಕ್ಕೆ ಒಡ್ಡಿಕೊಂಡ ಕೆಲವೇ ಕೆಲವರಲ್ಲಿ ಒಬ್ಬ. ದಿ ಕಾಲ್ ಆಫ್ ದಿ ವೈಲ್ಡ್ ಜಾಕ್ ಲಂಡನ್‌ನ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಒಂದು. ೧೪೦ ಪೌಂಡ್ ತೂಗುವ, ಸೇಂಟ್ ಬರ್ನಾರ್ಡ್-ಸ್ಕಾಚ್ ಶೆಫರ್ಡ್ ಮಿಶ್ರ ತಳಿಯ ಬಕ್ ಎನ್ನುವ ನಾಯಿಯ ಕುರಿತಾದದ್ದು. ಬೇರೆ ಸಾಕು ನಾಯಿಗಳಿಗಿಂತ ತುಸು ಹೆಚ್ಚಿನದೇ ಮುಚ್ಚಟೆಯಿಂದ ಪೋಷಿಸಲ್ಪಡುತ್ತಿದ್ದ ಬಕ್‌ನ ಆರಾಮದಾಯಕ ಜೀವನ ದಿಢೀರ್ ಅಂತ ಬದಲಾಗುತ್ತದೆ. ಅಪಹರಣಕ್ಕೊಳಗಾದ ಬಕ್, ರಾತ್ರಿ ಕಳೆದು ಬೆಳಗಾಗುವುದರೊಳಗೆ ಕ್ಲೊಂಡೈಕ್ ಗೋಲ್ಡ್ ರಶ್, ಗಡಿನಾಡಿನ ಕ್ರೂರ ಪ್ರಪಂಚದಲ್ಲಿ ಬಂದು ಬಿದ್ದಿರುತ್ತಾನೆ. ಅಲ್ಲಿಂದ ಕೈಯಿಂದ ಕೈಗಳಿಗೆ ಬದಲಾಗಿ ಕೊನೆಗೆ ಜಾನ್ ಥಾರ್ನ್‌ಟನ್ ಎಂಬ ಕರುಣಾಳುವಿನ ಹೃದಯದಲ್ಲಿ ಜಾಗ ಗಿಟ್ಟಿಸುತ್ತಾನೆ. ಅಪಹರಣಕ್ಕೊಳಗಾದ ರಾತ್ರಿಯಿಂದ ಜಾನ್ ಥಾರ್ನ್‌ಟನ್ ಸಿಗುವವರೆಗಿನ ಬಕ್‌ನ ಹೋರಾಟ ಯಾವ ಯೋಧನ ಸಾಹಕ್ಕಿಂತ ಕಡಿಮೆಯಿಲ್ಲ. ‘ಮನುಷ್ಯನ ಪ್ರೀತಿಗಾಗಿ...’ ಅಧ್ಯಾಯದಲ್ಲಿನ ಪ್ರಾಣಿ-ಮನುಷ್ಯನ ಒಡನಾಟದ ಬಗೆಗಿನ ವಿವರಣೆ ಮನಸ್ಸನ್ನು ಆರ್ದ್ರಗೊಳಿಸುತ್ತದೆ. ಕತೆ ನಡೆಯುವ ಪ್ರದೇಶದ ವಿವರಣೆ ಎಷ್ಟು ಂuಣheಟಿಣiಛಿ ಆಗಿದೆಯೆಂದರೆ... ಹೆಪ್ಪುಗಟ್ಟಿದ ನದಿ, ಬಾಜಿಯ ಹುಕಿ, ನೊರೆಯುಕ್ಕಿಸಿ ಪ್ರಪಾತಕ್ಕೆ ಚಿಮ್ಮುತ್ತಿದ್ದ ನೀರಿನ ಸೆಳೆತಕ್ಕೆ ಸಿಲುಕಿಕೊಂಡ ದೋಣಿ ಬಚಾವಾಗುವುದು, ಮಂಜಿನಲ್ಲಿ ಹೂತು ಗಟ್ಟಿಯಾಗಿರುವ ಜಾರು ಬಂಡಿಯ ತಳಪಟ್ಟಿಗಳನ್ನು ಮೇಲೆಬ್ಬಿಸುವ ಬಕ್... ಕಂಡುಂಡ ಕ್ಷಣದ ನೇರಾನೇರ ಅಭಿವ್ಯಕ್ತಿ!

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು228
ಪ್ರಕಟಣೆ ವರ್ಷ2024
ಆವೃತ್ತಿ1st
ತೂಕ-
ಆಯಾಮಗಳು-