ಮುಖ್ಯ ವಿಷಯಕ್ಕೆ ಹೋಗಿ (Skip to main content)
ಅಜೇಯ ದಿ ಕೌಂಟ್ ಆಫ್ ಮಾಂಟೆ ಕ್ರಿಸ್ಟೊ
15% ರಿಯಾಯಿತಿ
ಅನುವಾದ

ಅಜೇಯ ದಿ ಕೌಂಟ್ ಆಫ್ ಮಾಂಟೆ ಕ್ರಿಸ್ಟೊ

ಲೇಖಕ: ಟಿ.ಡಿ. ರಾಜಣ್ಣ ತಗ್ಗಿ

₹470₹55015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಅಜೇಯ - ದಿ ಕೌಂಟ್ ಮಾಂಟೆ ಕ್ರಿಸ್ಟೊ ಕಾದಂಬರಿಯು ಫ್ರೆಂಚ್ ಲೇಖಕ ಅಲೆಂಗ್ಸಾಡರ್ ಡ್ಯೂಮಾ ಬರೆದಿರುವ ಜಗತ್ಪ್ರಸಿದ್ಧ ಕಾದಂಬರಿ. ಇದು ಮನುಷ್ಯನ ರಾಗ-ದ್ವೇಷಗಳನ್ನು ಕಟ್ಟಿಕೊಡುವುದರ ಜೊತೆಗೆ ಫ್ರಾನ್ಸ್ ದೇಶದ ರಾಜಕೀಯ ಚರಿತ್ರೆಯನ್ನು ಬಹು ಸೂಕ್ಷ್ಮವಾಗಿ ಬಿಚ್ಚಿಡುತ್ತ ಹೋಗುತ್ತದೆ. ಆದರೆ ರಾಜಕೀಯ ವಿವರಗಳೇ ಕಾದಂಬರಿಯ ಪ್ರಮುಖ ವಸ್ತುವಲ್ಲ...! ರಾಜಕೀಯ ವಿವರಗಳು ಕಾದಂಬರಿಗೆ ಕೇವಲ ಪೂರಕ ವಸ್ತು ಮಾತ್ರ... ಹಾಗಾಗಿ ಇದು ಪ್ರೀತಿ ನಿವೇದನೆಯ ಪ್ರೇಮಕಾವ್ಯ... ಅಂತೆಯೇ ದ್ವೇಷಾಸೂಯೆಯಿಂದ ಕೂಡಿದ ಕುತಂತ್ರದ ಜೇಡರಬಲೆಯೂ ಕೂಡ... ಅಂತೆಯೇ ಇದೊಂದು ಯುಗಪುರುಷನ ಪ್ರತೀಕಾರದ ಕತೆಯೂ ಹೌದು... ಹಾಗಾಗಿ ಇದನ್ನು ನಾಲ್ಕು ಘಟ್ಟಗಳಲ್ಲಿ ಸಾಗುವ ಮಹಾ ಮಾನವತಾವಾದಿಯೊಬ್ಬನ ವಿಜಯಗಾಥೆ ಎಂದರೆ ತಪ್ಪಲ್ಲ... ಈ ಕಾದಂಬರಿಯ ನಾಯಕ ‘ಎಡ್ಮಂಡ್ ಡಾಂಟೆ.’ ಈತ ಮುಗ್ಧ ಹುಡುಗ... ಇನ್ನೂ ಹತ್ತೊಂಬತ್ತು ತುಂಬದ ಸಜ್ಜನ ಮತ್ತು ಸದ್ಗುಣಶೀಲ... ವೃತ್ತಿಯಿಂದ ನೌಕೆಯಲ್ಲಿ ನಾವಿಕ. ಶೀಘ್ರದಲ್ಲಿಯೇ ಕ್ಯಾಪ್ಟನ್ ಆಗಲಿರುವವ... ಜೊತೆಗೆ ಒಬ್ಬ ಸುಂದರ ಹುಡುಗಿಯ ಪ್ರೇಮಕ್ಕೆ ಪಾತ್ರನಾದವನು ಕೂಡ... ಪ್ರೇಮ ಮತ್ತು ಪದವಿ ಇವೆರಡೂ ಆತನಿಗೆ ನಿರಾಯಾಸವಾಗಿ ದಕ್ಕಿದ್ದನ್ನು ಕಂಡು ಅಸೂಯೆ ವ್ಯಕ್ತಪಡಿಸುವ ಫೆರ್ನಾಂಡೊ ಮತ್ತು ಡಾಂಗ್ಲರ್ ಎಂಬ ದುರುಳ ಯುವಕರ ಕುತಂತ್ರದಿಂದ ಆರಂಭಗೊಂಡು, ಸ್ವಾರ್ಥಿ ವಕೀಲ ವಿಲ್ಫರ್ಟ್‌ನ ಮೋಸದ ಫಲಿತವಾಗಿ ಎಡ್ಮಂಡ್ ಡಾಂಟೆಯು ಜೈಲುವಾಸಕ್ಕೆ ಹೋಗಬೇಕಾದುದು ಈ ಕಾದಂಬರಿಯ ಮೊದಲ ಘಟ್ಟ... ಇದರಲ್ಲಿ ಮನುಷ್ಯನ ಕಟಿಲತೆ, ಕುತಂತ್ರ, ಮೋಸ ಮಾನವೀಯತೆ ಎಲ್ಲವನ್ನೂ ಭಿನ್ನ ಆಯಾಮಗಳಲ್ಲಿ ಬಹಳ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಜಗತ್ತಿನ ಹತ್ತು ಶ್ರೇಷ್ಠ ಕಾದಂಬರಿಗಳಲ್ಲಿ ಇದು ಮೊತ್ತಮೊದಲನೆಯದಾಗಿ ನಿಲ್ಲಬಲ್ಲ ಕಾದಂಬರಿ ಎಂದರೆ ಅದು ಅತಿಶಯೋಕ್ತಿಯ ಮಾತಲ್ಲ.

ವಿಶೇಷತೆಗಳು

ISBN978-93-81577-55-4
ಭಾಷೆಕನ್ನಡ
ಪುಟಗಳು496
ಪ್ರಕಟಣೆ ವರ್ಷ2016
ಆವೃತ್ತಿ2nd
ತೂಕ960 ಗ್ರಾಂ
ಆಯಾಮಗಳು-