ಮುಖ್ಯ ವಿಷಯಕ್ಕೆ ಹೋಗಿ (Skip to main content)
ದಿ ಗರ್ಲ್ ವಿಥ್ ದಿ ಗೋಲ್ಡನ್ ಐಸ್
ಹೊಸ ಬಿಡುಗಡೆ15% ರಿಯಾಯಿತಿ
ಅನುವಾದ

ದಿ ಗರ್ಲ್ ವಿಥ್ ದಿ ಗೋಲ್ಡನ್ ಐಸ್

ಲೇಖಕ: ಟಿ.ಡಿ. ರಾಜಣ್ಣ ತಗ್ಗಿ

₹119₹14015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

‘ದಿ ಗರ್ಲ್ ವಿತ್ ದಿ ಗೋಲ್ಡನ್ ಐಸ್’ ಕೃತಿಯು ಫ್ರೆಂಚ್ ಲೇಖಕ ‘ಹುನೋರೆ ಡಿ ಬಾಲ್ಜಾಕ್’ ಬರೆದ ಕಾದಂಬರಿ. ಇದು ಬಾಲ್ಜಾಕ್ ಬರೆದ ಕಾದಂಬರಿಗಳಲ್ಲೇ ಅತ್ಯಂತ ಶ್ರೇಷ್ಠ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾದುದು. ಈ ಕಾದಂಬರಿಯು ‘ಹೆನ್ರಿ ಡಿ ಮಾರ್ಸೆ’ ಎಂಬ ಸುಂದರ ಯುವಕ ಮತ್ತು ‘ಹೊನ್ನ ಕಣ್ಣಿನ ಹುಡುಗಿ’ಯೆನಿಸಿದ ‘ಪಾಕಿಟಾ’ ಎಂಬ ವಿಚಿತ್ರ ಮತ್ತು ಅತ್ಯಪೂರ್ವ ಸುಂದರಿಯ ನಡುವೆ ನಡೆದ ಪ್ರೇಮ ಮತ್ತು ಪ್ರಣಯ ಕಲಾಪದ ಕತೆಯಾಗಿದೆ. ಪ್ರೇಮ ಎಷ್ಟು ಪ್ರಾಚೀನ ವಸ್ತುವೊ ಅಷ್ಟೇ ನಿತ್ಯನೂತನ ವಸ್ತುವೂ ಕೂಡ. ಪ್ರೇಮವನ್ನು ಯಾವುದೇ ನಿರ್ದಿಷ್ಟ ಕಾಲಕ್ಕೆ ತಳುಕು ಹಾಕಲು ಬರುವುದಿಲ್ಲ. ಪ್ರೇಮ ನಿತ್ಯ ಮತ್ತು ನಿರಂತರ. ಈ ಪ್ರೇಮ ಸಂವೇದನಾಶೀಲತೆಯಿಂದ ಕೂಡಿದ್ದು. ಅಂತೆಯೆ ಅದೊಂದು ಸಾಮಾಜಿಕ ವಿದ್ಯಮಾನವೂ ಕೂಡ. ಈ ಪ್ರೇಮವನ್ನು ಒಲುಮೆ, ಪ್ರೀತಿ, ಅಕ್ಕರೆ, ಒಲವು, ಕಾದಲ್ ಹೀಗೆ ಹಲವಾರು ಪರ್ಯಾಯ ಪದಗಳಿಂದ ಹೆಸರಿಸಿದರೂ ಪ್ರೇಮದ ಅರ್ಥವನ್ನು ನಿರ್ದಿಷ್ಟವಾದ ಪದಗಳಲ್ಲಿ ನಿಖರವಾಗಿ ಅರ್ಥೈಸಲಾಗದು. ಪ್ರೇಮ ಅನುಭವಕ್ಕೆ ದಕ್ಕುವುದೇ ಹೊರತು ಪದಕೋಶಗಳಲ್ಲಿ ಸಿಗುವಂಥದ್ದಲ್ಲ. ಪ್ರೇಮ ಎನ್ನುವುದು ತಾದಾತ್ಮ್ಯದಿಂದ ಕೂಡಿದ ಮಾನಸಿಕ ಅನುಭೂತಿ... ಅದೊಂದು ಭಾವನಾತ್ಮಕ ಪ್ರಕ್ರಿಯೆ. ಮೂಲಭೂತ ಬಯಕೆ... ಇಂದ್ರಿಯಾಪೇಕ್ಷೆ. ಅದು ಬಾಂಧವ್ಯಗಳ ಸಂವೇದನೆಯೂ ಕೂಡ. ಅದೊಂದು ಮೋಹ. ಅದೊಂದು ದಾಹ. ಅದೊಂದು ವಾಂಛೆ. ಅದೊಂದು ಸ್ವಾರ್ಥ. ಓರ್ವ ವ್ಯಕ್ತಿ ಇನ್ನೋರ್ವ ವ್ಯಕ್ತಿಯೊಂದಿಗೆ ಹೊಂದಬಯಸುವ ಭಾವನಾತ್ಮಕ ಸಂಬಂಧ. ಈ ಪ್ರೇಮವು ಸಂಕೀರ್ಣವೂ ಹೌದು, ಅಮೂರ್ತ ಸ್ವರೂಪದ್ದೂ ಹೌದು. ಪ್ರೇಮವೆನ್ನುವುದು ಎರಡು ದೇಹಗಳ ಬೆತ್ತಲಾಗುವಿಕೆಯಲ್ಲ, ಅದು ಎರಡು ಮನಸ್ಸುಗಳ ಬೆತ್ತಲಾಗುವಿಕೆ ಎಂದು ವಿವರಿಸಬಹುದಾದರೂ ಈ ಪ್ರೇಮಕ್ಕೆ ಪ್ರಾಥಮಿಕ ಉದ್ದೇಶ ಮತ್ತು ಅಂತಿಮ ಉದ್ದೇಶ ಎಂಬ ಎರಡು ಉದ್ದೇಶಗಳಿರುತ್ತವೆ. ಪ್ರಾಥಮಿಕ ಉದ್ದೇಶವು ಮನಸ್ಸುಗಳ ಮಿಲನದಲ್ಲಿ ಸಾಫಲ್ಯತೆಯನ್ನು ಕಂಡುಕೊಂಡರೆ, ಅಂತಿಮ ಉದ್ದೇಶವು ಶಾರೀರಿಕ ಮಿಲನದಲ್ಲಿ ಅಥವಾ ಪ್ರಣಯದಲ್ಲಿ ಕೊನೆಗೊಳ್ಳುತ್ತದೆ.

ವಿಶೇಷತೆಗಳು

ISBN978-81-972194-6-7
ಭಾಷೆಕನ್ನಡ
ಪುಟಗಳು116
ಪ್ರಕಟಣೆ ವರ್ಷ2024
ಆವೃತ್ತಿ1st
ತೂಕ300 ಗ್ರಾಂ
ಆಯಾಮಗಳು-