ಅನುವಾದ
ಹಿಂದೂಗಳು ಮತ್ತೊಂದು ಚರಿತ್ರೆ
ಲೇಖಕ: ಡಾ. ಬಂಜಗೆರೆ ಜಯಪ್ರಕಾಶ
₹400₹48017% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಹಿಂದೂಮತ ಎನ್ನುವುದು ಸರಳ, ನೇರ ವ್ಯಾಖ್ಯಾನಕ್ಕೆ ಒಳಪಡುವಂತಹದ್ದಲ್ಲ. ಅದನ್ನು ಏಕಮುಖ ದೃಷ್ಟಿಯಲ್ಲಿ ನೋಡುವುದರಿಂದ ಉಪಯೋಗವಿಲ್ಲ. ಅದೊಂದು ಪಾರಂಪರಿಕ ಬದುಕಿನ ಕಲಾತ್ಮಕ ಹೆಣಿಗೆ. ಏಕಕಾಲದಲ್ಲಿ ಶಿಲಾಯುಗದ ಜನರಿಂದ ಹಿಡಿದು ಈಚಿನ ಮೊಘಲ್ ಸಾಮ್ರಾಟರು ಹಾಗೂ ಬ್ರಿಟಿಷರವರೆಗಿನ ಕಾಲಾವಧಿಗಳ ಹಲವು ಸಾಂಸ್ಕೃತಿಕ ಪದರಗಳು ಅದರಲ್ಲಿ ಸೇರಿಕೊಂಡಿವೆ. ಅವುಗಳಲ್ಲಿ ಎಷ್ಟೋ ಅಂಶಗಳು ಈಗಲೂ ಕ್ರಿಯಾವಿಧಿಗಳ, ನಂಬಿಕೆಗಳ, ಆರಾಧನೆ ಮತ್ತು ಆಚರಣೆಗಳ ರೂಪದಲ್ಲಿ ಚಾಲ್ತಿಯಲ್ಲುಳಿದುಕೊಂಡಿವೆ.
ಇದಕ್ಕೆ ತಳಹದಿ ಒದಗಿಸಿರುವುದು ಯಾವುದೋ ಒಂದು ತತ್ತ್ವದರ್ಶನವಲ್ಲ. ಇದರ ಆಧ್ಯಾತ್ಮಿಕ ಹಾಗೂ ಲೌಕಿಕ ದೃಷ್ಟಿಕೋನಗಳ ಹಿಂದೆ ಪ್ರಾಯೋಗಿಕವಾದ, ಸಾಂಕೇತಿಕವಾದ ಸಾವಿರಾರು ಅಂಶಗಳ ಮೇಳೈಸುವಿಕೆಯಿದೆ. ಹಿಂದೂ ಧರ್ಮ ಎನ್ನಲಾಗುವುದು ವಾಸ್ತವವಾಗಿ ಒಂದು ಮತವಾಗಿರದೆ, ಒಂದು ಸಂಕೀರ್ಣ, ವೈಶಿಷ್ಟ್ಯಪೂರ್ಣ ಸಂಸ್ಕೃತಿಯಾಗಿದೆ. ಇದಕ್ಕೆ ಯಾರೋ ಕೆಲವರು ಮಾತ್ರ ವಾರಸುದಾರರಲ್ಲ, ವಕ್ತಾರರೂ ಅಲ್ಲ. ಇಂತಹದೊಂದು ಸಾಗರ ಸದೃಶ ಪ್ರಾಚೀನ ಬದುಕಿನ ಕ್ರಮವನ್ನು ಇಷ್ಟು ಮಾತ್ರವೇ ಎಂದು ಹೇಳಿ ಮುಗಿಸುವುದು ಮೂರ್ಖತನ.
ಇದು, ಹೌದು-ಅಲ್ಲ; ಹೌದು-ಅಲ್ಲ ಎರಡೂ ಹೌದು; ಹೌದು-ಅಲ್ಲ ಎರಡೂ ಅಲ್ಲ ಹಾಗೂ ಅದ್ಯಾವುದೂ ಅಲ್ಲ. ಹೀಗೆ ಅನೇಕಾಂತಗಳು, ಕೋನಗಳು, ಸಮೃದ್ಧ ತತ್ತ್ವದರ್ಶನಗಳು, ಸ್ಮೃತಿಗಳು, ಕಥನಗಳು ಒಂದರೊಳಗೊಂದು ಬೆರೆತು ಇತಿಹಾಸವಾಗಿದೆ. ಐತಿಹ್ಯವೂ ಆಗಿದೆ. ಇತಿಹಾಸ ಮಾತ್ರ ಖಚಿತ, ಐತಿಹ್ಯ ಕೇವಲ ಕಲ್ಪನಾತ್ಮಕ ಎನ್ನಲೂ ಬರದ ಹಾಗೆ ಎಷ್ಟೋ ಆಯಾಮಗಳಲ್ಲಿ ಇವು ಮುಪ್ಪುರಿಗೊಂಡಿವೆ.
ಇದೆಲ್ಲವನ್ನೂ ತೆರೆದ ಕಣ್ಣಿಂದ, ಮುಕ್ತ ಮನಸ್ಸಿನಿಂದ ದರ್ಶಿಸುವುದು ಒಂದು ಸಾಕ್ಷಾತ್ಕಾರಕ್ಕೆ ಸಮಾನವಾದ ಕ್ರಿಯೆ. ಬಹುಶಃ ಅದು ಅದರ ರೂಪಕಾರ್ಥದಲ್ಲಿ ವಿಶ್ವರೂಪ ದರ್ಶನ.
ವಿಶೇಷತೆಗಳು
| ISBN | 978-81-972194-2-9 |
| ಭಾಷೆ | ಕನ್ನಡ |
| ಪುಟಗಳು | 412 |
| ಪ್ರಕಟಣೆ ವರ್ಷ | 2025 |
| ಆವೃತ್ತಿ | 1nd |
| ತೂಕ | 700 ಗ್ರಾಂ |
| ಆಯಾಮಗಳು | - |





