ಅನುವಾದ
ವೃದ್ಧ ಮತ್ತು ಸಮುದ್ರ
ಲೇಖಕ: ಟಿ.ಡಿ. ರಾಜಣ್ಣ ತಗ್ಗಿ
₹153₹18015% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
‘ವೃದ್ಧ ಮತ್ತು ಸಮುದ್ರ’ ಕಾದಂಬರಿಯು ಇಂಗ್ಲಿಷ್‌ನ ಪ್ರಸಿದ್ಧ ಲೇಖಕ ಅರ್ನೆಸ್ಟ್ ಹೆಮ್ಮಿಂಗ್ವೆ ಬರೆದ ‘ದಿ ಓಲ್ಡ್‌ಮ್ಯಾನ್ ಅಂಡ್ ದಿ ಸೀ’ ಎಂಬ ಸಾಹಸಮಯ ಪುಟ್ಟ ಕಾದಂಬರಿಯ ಕನ್ನಡಾನುವಾದ. ಇದು ಅಪರವಯಸ್ಕನೊಬ್ಬನ ಅದ್ಭುತ ಸಾಹಸಗಾಥೆ. ಸ್ಯಾಂಟಿಯಾಗೊ ಎಂಬ ವೃದ್ಧನೊಬ್ಬ ತಾನೊರ್ವನೆ ಸಾಗರದಲ್ಲಿ ಮೂರು ದಿನಗಳ ಕಾಲ ಬೃಹತ್ ಮೀನೊಂದರ ಜೊತೆ ಹೋರಾಡಿ ಗೆದ್ದು ಸೋತ ಕತೆ. ಇದು ೧೯೫೨ರಲ್ಲಿ ರಚನೆಯಾಗಿ, ೧೯೫೩ರಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದುಕೊಂಡ ಕಾದಂಬರಿ. ಅಂತೆಯೆ ೧೯೫೪ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನವಾದ ಕಾದಂಬರಿ. ಜೊತೆಗೆ ಅರ್ನೆಸ್ಟ್ ಹೆಮ್ಮಿಂಗ್ವೆಯ ಖ್ಯಾತಿಯನ್ನು ವಿಶ್ವವಿಖ್ಯಾತಿ ಮಾಡಿದ ಕಾದಂಬರಿ.
ಈ ಕಾದಂಬರಿಯ ಪ್ರಧಾನ ವಸ್ತು, ಮೀನುಗಾರ ಮುದುಕನೊಬ್ಬ ತನ್ನ ಜೀವನಕ್ಕಾಗಿ ಸಮುದ್ರದೊಂದಿಗೆ ಮಾಡಿದ ಹೋರಾಟ, ಅಂತೆಯೆ ತಾನು ಶಿಕಾರಿ ಮಾಡಿದ ಭಾರಿ ಮೀನಿನೊಂದಿಗಿನ ಹೋರಾಟ, ಆ ಶಿಕಾರಿ ಮೀನನ್ನು ತಿನ್ನಲು ಬಂದ ಶಾರ್ಕ್ ಮೀನುಗಳೊಂದಿಗಿನ ಹೋರಾಟ, ತನ್ನ ನಿದ್ದೆಯೊಂದಿಗಿನ, ಹಸಿವಿನೊಂದಿಗಿನ ಹೋರಾಟ, ಮರಗಟ್ಟಿ ಹೋಗುತ್ತಿದ್ದ ತನ್ನ ಅಂಗಾಂಗಗಳ ಅಶಕ್ತತೆಯೊಂದಿಗಿನ ಹೋರಾಟ, ಸಹನೆಯೊಂದಿಗೆ ನಡೆಸಿದ ಹೋರಾಟ, ಸಹನೆ ನಶಿಸಿ ಶರೀರ ಗಡ್ಡೆಕಟ್ಟಿ ಪ್ರಾಣ ಹೋಗುವಂತಾದರೂ ನಿಲ್ಲದ ಅವಿರತ ಹೋರಾಟ... ಹೀಗೆ ಅನೇಕ ಹೋರಾಟಗಳ ಸಾಹಸ ಕಥನ. ಆದರೆ ಈ ಎಲ್ಲ ಹೋರಾಟಗಳಲ್ಲಿ ಮುದುಕ ತನ್ನ ಆತ್ಮಶಕ್ತಿ ಮತ್ತು ಧೀಶಕ್ತಿಯಿಂದ ಗೆದ್ದು ಬೀಗಿದರೂ ಮೀನನ್ನು ದಕ್ಕಿಸಿಕೊಳ್ಳುವಲ್ಲಿ ಸೋತು ಹೋದ ಮೀನುಗಾರ ಮುದುಕನ ಕರುಣಾಜನಕ ಕತೆ, ಇದೊಂದು ವ್ಯಥಾಗಾಥೆ.
ವಿಶೇಷತೆಗಳು
| ISBN | 978-81-972194-8-1 |
| ಭಾಷೆ | ಕನ್ನಡ |
| ಪುಟಗಳು | 144 |
| ಪ್ರಕಟಣೆ ವರ್ಷ | 2024 |
| ಆವೃತ್ತಿ | 1nd |
| ತೂಕ | 450 ಗ್ರಾಂ |
| ಆಯಾಮಗಳು | - |





