ಮುಖ್ಯ ವಿಷಯಕ್ಕೆ ಹೋಗಿ (Skip to main content)
ಜ಼ೆನ್ ಅನುಭವ
ಬೆಸ್ಟ್ ಸೆಲ್ಲರ್14% ರಿಯಾಯಿತಿ
ಅನುವಾದ

ಜ಼ೆನ್ ಅನುಭವ

ಲೇಖಕ: ವಿಜಯ ನಾಗ್ ಜಿ.

₹310₹36014% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಜ಼ೆನ್ ನ ಬೋಧನೆಗಳು ನಮ್ಮ ಆಳವಾದ ಪ್ರಜ್ಞೆಗೆ ದಾರಿಯನ್ನು ಸುಗಮಗೊಳಿಸುತ್ತದೆ. ಉಳಿದೆಲ್ಲವನ್ನೂ ನಾವೇ ಮಾಡಬೇಕಾಗಿರುತ್ತದೆ. ಜ಼ೆನ್ ಎರಡು ವೈರುಧ್ಯವಾದ ಆಲೋಚನಾ ಧಾರೆಗಳನ್ನು ಅಂಗೀಕರಿಸಿರುವುದರ ಮೇಲೆ ಅಡಿಪಾಯವನ್ನು ಹೊಂದಿದೆ: ತಾರ್ಕಿಕ ಹಾಗೂ ಅಂತರ್ಬೋಧನೆ. ತಾರ್ಕಿಕತೆಯು ಭಾಷೆ, ವಿಚಾರ, ಕಾರಣವನ್ನು ಬಳಸಿಕೊಳ್ಳುತ್ತದೆ. ಇದರ ತತ್ವಗಳನ್ನು ಕಲಿಸಬಹುದಾಗಿದೆ. ಆದರೆ ಅಂತರ್ಬೋಧನಾ ಜ್ಞಾನವು ಬೇರೆಯದೇ ಆಗಿದೆ. ಇದು ನಮ್ಮ ಪ್ರಜ್ಞೆಯಲ್ಲಿ ಆಳವಾಗಿ ಅಡಗಿರುತ್ತದೆ. ಪದಗಳಿಂದ ಆಚೆಯಿದ್ದು, ತಾರ್ಕಿಕ ಆಲೋಚನೆಗಳಂತೆ ಅಂತರ್ಬೋಧೆಯನ್ನು ಕಲಿಸು ವುದುಕ್ಕಾಗುವುದಿಲ್ಲ ಹಾಗೂ ಉದ್ದೀಪನಗೊಳಿಸಲೂ ಸಹ ಆಗುವುದಿಲ್ಲ. ಸತ್ಯವಾಗಿ ಹೇಳುವುದಾದರೆ ನಮ್ಮ ತಾರ್ಕಿಕ ಮನಸ್ಸಿನಿಂದ ಅಂತರ್ಬೋಧನಾ ಪ್ರಜೆಯನ್ನು ಹುಡುಕುವುದೇ ಆಗಲಿ ಅಥವಾ ಯುಕ್ತಿಯಿಂದ ಬಳಸುವುದಕ್ಕಾಗಲಿ ಸಾಧ್ಯವಿಲ್ಲ. ಇದನ್ನು ಮುಷ್ಠಿಯಿಂದ ಹಿಡಿಯುವುದಾಗಲಿ ಅಥವಾ ನಮ್ಮ ಬಾಹ್ಯ ಚಕ್ಷುಗಳಿಂದ ನೋಡುವುದಕ್ಕಾಗಲಿ ಸಾಧ್ಯವಿಲ್ಲ. ಜ಼ೆನ್ ಗುರುಗಳು ಈ ಹುಗಿದಿರುವ ಮಾನವ ಪ್ರಜ್ಞೆಯನ್ನು ತಲುಪಲು ಹಲವಾರು ಮಾರ್ಗಗಳನ್ನು ರೂಪಿಸಿದ್ದಾರೆ. ಅವರ ಕೆಲ ವಿಧಾನಗಳಾದ ಧ್ಯಾನ-ಭಾರತೀಯ ಬೌದ್ಧ ಧರ್ಮದಿಂದ ಎರವಲು ಪಡೆದಿದ್ದು, ಹಾಗೂ ಕೆಲ ಅತಾರ್ಕಿಕ ವಿಪರ್ಯಾಸಗಳು-ಚೈನಾದ ತಾವೋಗಳಿಂದ ಪಡೆದಿದ್ದದ್ದಾಗಿವೆ. ಆದರೆ ಇತರೆ ಸೃಜನೆಗಳಾದ ಆಘಾತಕಾರಿಯಾಗಿ ಕಿರಿಚುವ ಅಥವಾ ಹೊಡೆಯುವ ಕ್ರಿಯೆಗಳು, ಅವರದ್ದ ಅನುಭವಗಳಿಂದ ಹೊರಹೊಮ್ಮಿದೆ. ಪೂರ್ಣವಾಗಿ ಇವೆಲ್ಲವೂ ಸಾಧನವಾಗಿವೆಯೇ ಹೊರತು ಇವೇ ಅಂತ್ಯವಲ್ಲ. ಅಂತಿಮವಾದುದ್ದೆಂದರೆ ಅಂತರ್ಬೋಧನೆಯಿಂದ ಏಕೈಕ ಮಹತ್ವವಾದ ಅಂತದೃಷ್ಟಿಯನ್ನು ಹೊಂದುವುದಾಗಿದೆ. ಅದೆಂದರೆ ನಾವು ಮತ್ತು ನಮ್ಮ ಸುತ್ತಲಿನ ಜಗತ್ತು ಒಂದೇ ಆಗಿದ್ದು, ಈ ಎರಡೂ ಸಹ ಪರಿಪೂರ್ಣತೆಯ ಭಾಗವಾಗಿದೆ ಎಂಬುದಾಗಿದೆ. ನಮ್ಮ ತಾರ್ಕಿಕವಾದ ಮನಸ್ಸು ಈ ಸತ್ಯವನ್ನು ಮರೆಮಾಚುತ್ತದೆ. ಆದ್ದರಿಂದ ಇದನ್ನು ನಾವು ಅಲ್ಪ ಕಾಲಕ್ಕಾದರೂ ತಡೆಯಬೇಕು. ವಿಚಾರಪರತೆಯು ನಮ್ಮ ಮನಸ್ಸನ್ನು ಕುಗ್ಗಿಸುತ್ತದೆ. ಸಾಕ್ಷಾತ್ಕಾರವು ಇದನ್ನು ಸ್ವತಂತ್ರಗೊಳಿಸುತ್ತದೆ. ವ್ಯಂಗ್ಯವೆಂದರೆ, ಈ ಪರಮಪ್ರಜ್ಞೆಯ ಕ್ಷಣವನ್ನು ಅನುಭವಿಸುವಾತ, ಈ ಏಕತ್ವವು ಹೊಂದಿದ ಕ್ಷಣದಲ್ಲಿ ಮುಂದೆ ಇನ್ನು ಅರಿಯುವುದು ಏನೂ ಇಲ್ಲವೆಂಬುದರ ಅನುಭವವನ್ನು ಹೊಂದುವುದಾಗಿದೆ. ಜಗತ್ತು ಬದಲಾವಣೆಯನ್ನು ಹೊಂದದೆ ಹಾಗೆಯೆ ಇರುತ್ತದೆ. ಆದರೆ, ವ್ಯತ್ಯಾಸವೆಂದರೆ ಜಗತ್ತು ನಮ್ಮ ಪ್ರಜ್ಞೆಯ ಭಾಗವಾಗಿರುತ್ತದೆ. ಅದೂ ಸಹ ಪ್ರತ್ಯಕ್ಷವಾಗಿಯೇ ಹೊರತು ವಿಶ್ಲೇಷಣೆಗಳ ಮೂಲಕವಲ್ಲ. ಈಗಾಗಲೇ ನಿಮ್ಮದೇ ಭಾಗವಾಗಿರುವುದರೊಂದಿಗೆ ಜೋಡಿಸುವುದೆನ್ನುವ ಅರ್ಥವು ಇದಾಗಿರುವುದರಿಂದ, ನೋವನ್ನುಂಟುಮಾಡುವ ವಸ್ತುಗಳೆಡಗಿನ ದಾಸ್ಯದಿಂದ ಸ್ವಾತಂತ್ರವನ್ನು ಹಠಾತ್ ಆಗಿ ಅನುಭವಿಸುವಿಕೆಯು ಉಂಟಾಗುತ್ತದೆ. xiii ಇದರೊಡನೆ ಕೃತ್ರಿಮವಾದ ಮೌಲ್ಯಗಳ ನಿರ್ಬಂದಗಳಿಂದ ಬಿಡುಗಡೆಯೂ ಬರುತ್ತದೆ. ವಿಧಾನಗಳನ್ನು ರಚಿಸುವುದು ಹಾಗೂ ವಿಂಗಡಿಸುವುದು ಕಾಮನಬಿಲ್ಲಿನ ವರ್ಣಗಳು ನಶಿಸುವಂತೆ ಈ ಎರಡೂ ವಾಸ್ತವಿಕತೆಯ ಅನುಭವವನ್ನು ತೆಗೆದು ಹಾಕುತ್ತದೆ. ಇದರೊಟ್ಟಿಗೆ ಜಗತ್ತಿನ ಶ್ರೀಮಂತಿಕೆಯನ್ನು ಆಸ್ವಾದಿಸುವುದನ್ನು ಕಡಿಮೆಗೊಳಿಸುತ್ತದೆ. ಯಾವುದು ಸರಿ ಅಥವಾ ತಪ್ಪುಗಳೆಂದು ಗುರುತಿಸುವುದೂ ಸಹ ಸಮೀಪದಿಂದ ದೃಷ್ಟಿಗೆ ಗೋಚರಿಸುತ್ತದೆ. ಆಲನ್ ವ್ಯಾಟ್ ಗಮನಿಸಿದಂತೆ ಜ಼ೆನ್ ಸರಿ ತಪ್ಪುಗಳ ಕ್ಷೇತ್ರಗಳಿಂದಾಚೆ ವಿಶಾಲವಾದ ಏಕತ್ವವೆಂಬುದರ ಅನಾವರಣವಾಗಿದ್ದು, ಅದರಲ್ಲಿ ಅಪರಾಧಿ ಭಾವನೆಯಾಗಲಿ ಅಥವಾ ಆರೋಪಗಳೇ ಆಗಲಿ ಅಗತ್ಯವೆನಿಸುವುದಿಲ್ಲ, ಇಲ್ಲಿ ಸ್ವಯಂ ಎಂಬುವುದು ಅಂತಿಮವಾದ ಭಗವಂತನೊಡಗೂಡಿ ವ್ಯತ್ಯಾಸವೇ ಇಲ್ಲದಂತಾಗುತ್ತದೆ. ಹಾಗೂ, ಇನ್ನೂ ಹೇಳುವುದಾದರೆ, ಭಗವಂತನೂ ಸಹ ನಮ್ಮ ಪ್ರಜ್ಞೆಯೊಳಗೂಡಿ ಸ್ವಯಂ ಆಗುವಿಕೆಯಾಗಿದೆ. ಜ಼ೆನ್ ನಲ್ಲಿ ಎಲ್ಲಾ ದ್ವಂದ್ವಗಳೂ ಕರಗಿಹೋಗುತ್ತವೆ. ಬಹಳ ವಿಶಾಲವಾದ ಸತ್ಯದೊಂದಿಗೆ ಸೇರಲ್ಪಡುತ್ತದೆ. ಜ಼ೆನ್ ನಲ್ಲಿ ಈ ಎಲ್ಲವನ್ನು ಸ್ಪಷ್ಟವಾಗಿ ಬೋಧಿಸುವುದಿಲ್ಲ. ಬದಲಾಗಿ ಉಳಿದೆಲ್ಲವೂ ನಮ್ಮ ಪ್ರಜ್ಞೆಯಿಂದ ದೂರ ಹೋದಾಗ ಇದರ ಅವಿಷ್ಕಾರವಾಗುತ್ತದೆ. ಹನ್ನೆರಡನೇ ಶತಮಾನದ ಚೀನಾ ವಿದ್ವಾಂಸನೋರ್ವ ಜ಼ೆನ್ ವಿಧಾನವನ್ನು ಸಂಕ್ಷೇಪಿಸುತ್ತಾ: ಜ಼ೆನ್ ನ ಗುರುಗಳು ಸರಳವಾದ ಭಾಷೆಯಲ್ಲಿ ಎಲ್ಲವನ್ನು ತಿಳಿಸುವ ಅಪಾಯವನ್ನು ಹೊಂದಲು ಇಚ್ಛಿಸುವುದಿಲ್ಲವಾದ್ದರಿಂದ, ಅವರ ಅನುಯಾಯಿಗಳು ತಮ್ಮದೇ ಆದ ಆಲೋಚನೆ ಮತ್ತು ಒಗಟುಗಳನ್ನು ಬಿಡಿಸುವುದರ ಮೂಲಕ ಫಲಿತಾಂಶವನ್ನು ಒಕ್ಕಣೆ ಮಾಡಬೇಕಿದೆ ಎನ್ನುತ್ತಾರೆ. ಈ ಪುಟಗಳಲ್ಲಿ ಜ಼ೆನ್ ಅನ್ನು ಒಕ್ಕಣೆ ಮಾಡುವುದನ್ನು ನಾವು ನೋಡಬಹುದಾಗಿದೆ. ಜ಼ೆನ್ ಗುರುಗಳು ಜ಼ೆನ್ ನ ಅನುಭವದ ಮುಖಾಂತರ ಇದರ ಹೊಸ ಲೋಕವನ್ನು ಬಯಲು ಮಾಡುತ್ತಾರೆ.

ವಿಶೇಷತೆಗಳು

ISBN 978-93-81244-76-0
ಭಾಷೆಕನ್ನಡ
ಪುಟಗಳು320
ಪ್ರಕಟಣೆ ವರ್ಷ2018
ಆವೃತ್ತಿ4 th EDTION
ತೂಕ700 ಗ್ರಾಂ
ಆಯಾಮಗಳು-