ಮುಖ್ಯ ವಿಷಯಕ್ಕೆ ಹೋಗಿ (Skip to main content)
ಉಪೇಂದ್ರನಾಥ ಅಶ್ಕರರ ಐದು ನೀಳ್ಗಥೆಗಳು
ಹೊಸ ಬಿಡುಗಡೆ17% ರಿಯಾಯಿತಿ
ಅನುವಾದ

ಉಪೇಂದ್ರನಾಥ ಅಶ್ಕರರ ಐದು ನೀಳ್ಗಥೆಗಳು

ಲೇಖಕ: ಪಾರ್ವತಿ ಜಿ. ಐತಾಳ್

₹100₹12017% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಈ ಸಂಕಲನದಲ್ಲಿನ ಕಥೆಗಳಲ್ಲಿ ಸೆಕ್ಸ್‌ನ್ನು ಕಥಾವಸ್ತುವಿನ ಕೇಂದ್ರ ಬಿಂದುವಾಗಿ ಹೊಂದಿರುವ ‘ಅಂಬಾಸಿಡರ್’ ಹಾಗೂ ‘ಅಸಹಾಯಕತೆ’ ಈ ಎರಡು ಕಥೆಗಳು ಅಶ್ಕರ ವಿಚಾರಧಾರೆಯ ಮತ್ತೊಂದು ಅಂಚನ್ನು ಪ್ರಸ್ತುತಪಡಿಸುತ್ತವೆ. ‘ಕಾಮಾನುಭವ ಕ್ರಿಯಾಶೀಲತೆಗೆ ದಾರಿ’ ಎಂಬ ಅಂಶವನ್ನು ತೆರೆದಿಡುವ ‘ಅಂಬಾಸಿಡರ್’ ಒಂದು ದುರಂತ ಕಥೆ. ಅತ್ಯಂತ ಹೀನಾಯವಾಗಿ ಕಾಡುವ ‘ಸೆಕ್ಸ್’ನ್ನು ತಲೆಯಲ್ಲಿ ತುಂಬಿಕೊಂಡು ಗುಪ್ತ ತೊಳಲಾಟಕ್ಕೆ ಸಿಲುಕುವ ಬದಲು ಅದಕ್ಕೊಂದು ‘ಲೆಟ್ ಔಟ್’, ಒಂದಲ್ಲ ಒಂದು ಸೇಪ್ಟಿವಾಲ್ವ್ ಇಟ್ಟುಕೊಂಡು ಮನಸ್ಸನ್ನು ಏಕಾಗ್ರಗೊಳಿಸುವ ಹಂಬಲದಲ್ಲಿ ಅತ್ಯಂತ ಕ್ರಿಯಾಶೀಲ, ಚುರುಕು ಯುವಕ ‘ಭೋಲಾ’ ಅಂಬಾಸಿಡರ್ ಆಗಬೇಕಾಗಿದ್ದವನು ಲೈಂಗಿಕ ರೋಗಿಯಾಗಿ, ಭಿಕಾರಿಯಾಗಿ ದುರಂತದ ಅಂಚನ್ನು ತಲುಪಿರುತ್ತಾನೆ. ಕಾಮದ ರಾಯಭಾರತ್ವ ನಿವಾರಿಸುವ ಹುಚ್ಚು ಆವೇಶದಲ್ಲಿ ಬದುಕಿನ ರಾಯಭಾರತ್ವದಿಂದ ಭೋಲಾ ವಂಚಿತನಾಗುತ್ತಾನೆ; ಪ್ರಾಯಸ್ಥತೆಯಲ್ಲಿ ಕಾಮವನ್ನು ಬಲಾತ್ಕಾರವಾಗಿ ನಿಗ್ರಹಿಸಿ ಒಳಗೊಳಗೇ ತಹ ತಹಿಸುವ ವಿಕ್ಷಿಪ್ತ ಮನಸ್ಸಿನ ಯುವಜನತೆಯ ಪ್ರತಿನಿಧಿಯಾಗಿ ‘ಹರಗೋಪಾಲ್’ ನಿಂತರೆ ತೆರೆದಿಟ್ಟ ಪುಸ್ತಕದಂತೆ ಭೋಲಾ ಗೋಚರಿಸುತ್ತಾನೆ. ಮನುಷ್ಯನ ಮೂಲಭೂತ ಅವಶ್ಯಕತೆಗಳಾದ ಹಸಿವು, ನೀರಡಿಕೆ, ವಸ್ತ್ರ, ವಸತಿ ಇವುಗಳ ಪ್ರಾಪ್ತಿಗಿರುವ ವ್ಯವಸ್ಥೆಯಂತೆಯೇ ಇದಕ್ಕಿಂತಲೂ ಪ್ರಬಲವಾದ ‘ಕಾಮ’ದ ಹಸಿವಿಗೆ ನಮ್ಮ ಸಮಾಜದಲ್ಲಿ ಇರುವ ಮದ್ದಾದರೂ ಏನು? ಎಂದು ಅಶ್ಕರು ಪ್ರಶ್ನಿಸುತ್ತಾರೆ. ಅವರ ಈ ಪ್ರಶ್ನೆಯ ಕಾಡುವಿಕೆಯಿಂದಾಗಿ ‘ಬೇಬಸಿ’ (ಅಸಹಾಯಕತೆ) ಕಥೆ ಸೃಷ್ಟಿಯಾಯಿತು. ‘ಅಸಹಾಯಕತೆ’ ಕಾಮದ ಲಕ್ಷ್ಮಣ ರೇಖೆಯ ಪರಿಧಿಯೊಳಗೆ ಮಾನವನ ಬದುಕು ಸಾಗಿರುವ ಅದರಲ್ಲೂ ಕಾಮದ ಬಗ್ಗೆ ‘ಭಾರತೀಯ ಅಭಿಪ್ರಾಯ’ ವ್ಯಕ್ತಪಡಿಸುವ ಒಂದು ಯಶಸ್ವಿಕತೆ ಎನಿಸುತ್ತದೆ. ಲಾಲ-ಆಯಾರ ಅತೃಪ್ತ ಪಾತ್ರಗಳು, ಕಾಮದ ಅಸಹಾಯಕತೆ, ಆಯಾ ‘ಕುರೂಪಿ’ ಎಂಬ ಕಾರಣಕ್ಕೆ ಲಾಲಾನ ಹಿಂಜರಿಕೆ ಆದರೆ ಸ್ಪರ್ಶ ಮಾತ್ರಕ್ಕೇ ತೃಪ್ತಿಪಟ್ಟುಕೊಳ್ಳುವ ಆಯಾ-ಎಲ್ಲ ಅಂಶಗಳನ್ನು ಮಿರಿದ್ದು ಕಾಮ-ಲೈಂಗಿಕತೆ ಎಂಬುದನ್ನು ಲೇಖಕರು ಸೂಚ್ಯವಾಗಿ ಈ ಕತೆಯಲ್ಲಿ ನಿರೂಪಿಸಿದ್ದಾರೆ. ಈ ಕತೆಯ ತಿರುಳು ಅಸಹಾಯಕತೆಯ ಹಂತದಲ್ಲಿ ಅಸಹಾಯಕವಾಗಿಯೇ ಉಳಿದು ಬಿಡುತ್ತದೆ. ಬಹುಶಃ ‘ಸೆಕ್ಸ್’ ಬಗೆಗಿನ ಅಶ್ಕ್‌ರ ದೃಷ್ಟಿಕೋನವನ್ನು ಸಾಂಕೇತಿಕವಾಗಿ ತೆರೆದಿಡುವ ಇವೆರಡು ಅವರ ಉತ್ತಮ ಕತೆಗಳೆನ್ನಬಹುದು.

ವಿಶೇಷತೆಗಳು

ISBN978-93-81244-70-8
ಭಾಷೆಕನ್ನಡ
ಪುಟಗಳು104
ಪ್ರಕಟಣೆ ವರ್ಷ2018
ಆವೃತ್ತಿ5th EDITION
ತೂಕ320 ಗ್ರಾಂ
ಆಯಾಮಗಳು-