ಮುಖ್ಯ ವಿಷಯಕ್ಕೆ ಹೋಗಿ (Skip to main content)
ವಯನಾಡಿನ ಕನಸು
ಹೊಸ ಬಿಡುಗಡೆ11% ರಿಯಾಯಿತಿ
ಅನುವಾದ

ವಯನಾಡಿನ ಕನಸು

ಲೇಖಕ: ಪಾರ್ವತಿ ಜಿ. ಐತಾಳ್

₹125₹14011% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಎಡಪಂಥೀಯ ಸಿದ್ದಾಂತಗಳಿಗೆ ಬದ್ಧರಾಗಿ ತಮ್ಮ ನಿಲುವುಗಳನ್ನು ರೂಪಿಸಿಕೊಂಡಿರುವ ಕೃಷ್ಣನ್‌ಕುಟ್ಟಿಯವರು ಬರೆದಿರುವ ಕಥೆಗಳು ಸಮಾಜದಲ್ಲಿ ಬದಿಗೆ ತಳ್ಳಲ್ಪಟ್ಟ ದಮನಿತ ವರ್ಗದವರ ಸ್ಥಿತಿಗತಿಗಳನ್ನು ಚಿತ್ರಿಸುವುದರ ಜತೆಗೆ ix ಜಾಗತಿಕರಣಗೊಂಡು ಮಿತಿಮೀರಿದ ವೇಗದಲ್ಲಿ ಸಾಗುತ್ತಿರುವ ಆಧುನಿಕ ಬದುಕಿನಲ್ಲಿ ಮರೆಗೆ ಸರಿಯತ್ತಿರುವ ಭಾವನಾತ್ಮಕ ಸಂಬಂಧಗಳನ್ನು ನಿರೂಪಿಸುತ್ತವೆ. ನಮ್ಮ ಸಾಮಾಜಿಕ ಬದುಕು ಅದೆಷ್ಟು ಮಟ್ಟಿಗೆ ಬಡ ರೈತರ ಮತ್ತು ಕೂಲಿ ಕಾರ್ಮಿಕರ ಬೆವರ ಹನಿಗಳ ಮೇಲೆ ಅವಲಂಬಿತವಾಗಿದೆ ಮತ್ತು ನಾವು ಹೇಗೆ ನಮ್ಮ ಬೆಳವಣಿಗೆಯ ಹಂತ ಹಂತದಲ್ಲೂ ಅವರನ್ನು ನೆನಪಿಸಿಕೊಳ್ಳುತ್ತ ಅವರಿಗೆ ಚಿರಋಣಿಗಳಾಗಿರಬೇಕು ಎಂಬ ಪ್ರಜ್ಞೆಯನ್ನು ಓದುಗನಲ್ಲಿ ಮೂಡಿಸುವ “ ನನ್ನ ಚೀರಾಳಜ್ಜನ ಕಡುಗತ್ತಿ” ಒಂದು ಅಪೂರ್ವ ಸಂವೇದನೆಯ ಕಥೆಯಾಗಿ ಮನ ಮುಟ್ಟುತ್ತದೆ. ಭೂಮಿ ಮತ್ತು ಬೇಸಾಯಗಳನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದ ಐತನಂಥ ದಲಿತರು ಸಮಾಜದಲ್ಲಿ ಯಾವ ರೀತಿಯ ಶೋಷಣೆಗೆ ಗುರಿಯಾಗುತ್ತಾರೆ ಅನ್ನುವುದನ್ನು “ ಆದಿತ್ಯ ಕಾಯುವ ಬತ್ತ” ರೂಪಕಾತ್ಮವಾಗಿ ಕಟ್ಟಿಕೊಡುತ್ತದೆ. ಸೂರ್ಯ(ಆದಿತ್ಯ) ಎಲ್ಲರಿಗೂ ಸಮಾನವಾಗಿ ಬಿಸಿಲು ಕೊಟ್ಟರೂ ಅದನ್ನು ಬಳಸುವವರ ನಡುವೆ ಇಂಥ ತಾರತಮ್ಯ, ಮೇಲು ಕೀಳುಗಳು ಯಾಕೆ ಹುಟ್ಟಿಕೊಂಡಿವೆ ಎಂಬ ಪ್ರಶ್ನೆ ಕೇಳುವ ಮೂಲಕ ಓದುಗನ ಅಂತಃಪ್ರಜ್ಞೆಯನ್ನು ಹೊಡೆದೆಬ್ಬಿಸುವ ಈ ಕಥೆ ಸಂಕಲನದ ಅತ್ಯುತ್ತಮ ಕಥೆ ಎನ್ನಬಹುದು. ‘ಕತ್ತಲಲ್ಲಿ ಪರಿಮಳ ಬೀರುವ ಮಲ್ಲಿಗೆ ಹೂ’ ಮತ್ತು ‘ವಯನಾಡಿನ ಕನಸು’ ಗಂಡು ಹೆಣ್ಣುಗಳ ನಡುವಣ ಪ್ರೀತಿಯ ಕುರಿತು ಧ್ಯಾನಿಸುವ ಕಥೆಗಳು. ಸಾವಿನ ಸಾನಿಧ್ಯದಲ್ಲಿ ಪ್ರೀತಿ ಅರಳಿಕೊಳ್ಳುವ ವಿಶಿಷ್ಟ ಸನ್ನಿವೇಶದ ಚಿತ್ರಣ ‘ಕತ್ತಲಲ್ಲಿ...’ ಕಥೆಯಲ್ಲೂ ಕೇರಳದ ಅತ್ಯಂತ ಸುಂದರ ತಾಣವಾದ ವಯನಾಡಿನ ನಿಸರ್ಗದ ವರ್ಣನೆಯು ‘ವಯನಾಡಿನ ಕನಸಿ’ನಲ್ಲೂ ಬಹಳ ಕಾವ್ಯಾತ್ಮಕವಾಗಿ ಮೂಡಿ ಬಂದಿದೆ. ಎಲ್ಲರೂ ಅಪಶಕುನದ ಹಕ್ಕಿಯೆಂದು ತಾತ್ಸಾರ ಮಾಡುವ ಕಾಗೇಗೂ ತನ್ನನ್ನು ಪ್ರೀತಿಸಿದವರನ್ನು ಪ್ರೀತಿಸಿ ಸಂಬಂಧ ಬೆಳೆಸಿಕೊಳ್ಳುವ ಸುಸಂಸ್ಕೃತ ಮನಸ್ಸಿದೆ ಎಂಬುದನ್ನು ಸೂಚಿಸುವ ‘ಸುಕೇಶನ ಕಾಗೆಗಳು’ ಒಂದು ಭಿನ್ನ ಶೈಲಿಯ ಕಥೆ. ಹಾಗೆಯೇ ಆಧುನಿಕ ಬದುಕನ್ನು ಅತಿಕ್ರಮಿಸಿ ನಿಲ್ಲುತ್ತಿರುವ ಮೀಡಿಯಗಳಲ್ಲಿ ನಿತ್ಯ ನಾಟಕವಾಗಿ ಮೂಡಿಬರುತ್ತಿರುವ ರಿಯಾಲಿಟಿ ಶೋಗಳನ್ನು ವಿಡಂಬಿಸುವ ‘ಗ್ರೀನ್ ಅಂಡ್ ರೆಡ್ ಚಿಲ್ಲಿ’ ಒಂದು ಅರಿವೂ ಮೂಡಿಸುವ ಕಥೆ. ಒಟ್ಟಿನಲ್ಲಿ ಈ ಸಂಕಲನದಲ್ಲಿ ಸೇರಿರುವ ಎಲ್ಲ ಕಥೆಗಳು ನಾನು ಒಂದಿಲ್ಲೊಂದು ಕಾರಣಕ್ಕೆ ಮೆಚ್ಚಿಕೊಂಡ ಕಥೆಗಳಾಗಿವೆ

ವಿಶೇಷತೆಗಳು

ISBN 978-93-81577-63-9
ಭಾಷೆಕನ್ನಡ
ಪುಟಗಳು112
ಪ್ರಕಟಣೆ ವರ್ಷ2017
ಆವೃತ್ತಿ3rd Edition
ತೂಕ250 ಗ್ರಾಂ
ಆಯಾಮಗಳುBook Size : 1/4 Crown(23x15.5) (International Standard Book Size)