ಅನುವಾದ
ಅಘನಾಶಿನಿ ಭಾಗ -೧
ಲೇಖಕ: ಕನ್ನಡಕ್ಕೆ : ಕೆ ಶ್ರೀನಾಥ್ (ಕೃಷ್ಣಮೂರ್ತಿ ಶ್ರೀನಾಥ್)
₹700₹85018% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಟಾಲ್ಸ್ಟಾಯ್ ಬರೆದಂತಹ ಅನ್ನಾ ಕರೆನಿನ ೧೮೭೭ರಲ್ಲಿ ಪ್ರಕಟಗೊಂಡಿತು, ಅದನ್ನು ಆ ಕಾಲದಲ್ಲಿ ಎಂದೂ ಬರೆಯದೇ ಇದ್ದಂತಹ ಶ್ರೇಷ್ಠ ಕಾದಂಬರಿ ಎಂದು ಪರಿಗಣಿಸಲಾಗಿತ್ತು. ಅದೊಂದು ಸಂಕಿರ್ಣತೆಯಿಂದ ಕೂಡಿದ ಪರಸ್ಪರವಾಗಿ ಹೆಣೆದಂತಹ ಪ್ರೀತಿಯ, ದಾಂಪತ್ಯದ್ರೋಹದ, ಕುಟುಂಬದ ಮತ್ತು ಸಮಾಜದ ಸಂಗತಿಗಳನ್ನು ಹೊಂದಿದ ಕಥಾನಕವಾಗಿದೆ. ಇದೊಂದು ಹತ್ತೊಂಭತ್ತನೆ ಶತಮಾನದ ಶ್ರೀಮಂತ ವರ್ಗದಲ್ಲಿನ ಘಟನೆಗಳನ್ನು ಒಳಗೊಂಡಿದೆ. ಈ ಕಥಾನಕದ ಹೃದಯದಲ್ಲಿ ಇರುವುದು ಎರಡು ಕಥೆಗಳು. ಒಂದು ಭಾವೋದ್ರಿಕ್ತ ಅಘನಾಶಿನಿ(ಅನ್ನಾ ಕರೆನಿನ) ಮತ್ತು ಭಗವಾನ್ (ವ್ರಾನ್ಸಕಿ) ರನ್ನು ಒಳಗೊಂಡಿರುವುದು, ಇನ್ನೊಂದು ತೇಜಸ್ವಿಯ (ಲೆವಿನ್) ನೈತಿಕವಾದಂತಹ ಮತ್ತು ಆಧ್ಯಾತ್ಮಿಕವಾದ ಪಯಣವನ್ನು ಒಳಗೊಂಡಿರುವುದು.
ಅಘನಾಶಿನಿಯೊಬ್ಬಳ ಪಾತ್ರವೇ ಸಾಕು ಇಡಿ ಸಾಹಿತ್ಯ ಕ್ಷೇತ್ರದಲ್ಲಿಯೇ ಅತ್ಯಂತ ಬಲವಾದ ಮತ್ತು ದುರಂತದಿಂದ ಕೂಡಿದ ಪಾತ್ರವಾಗಿ ಪ್ರತಿಬಿಂಬಿತವಾಗುವುದಕ್ಕೆ. ಅವಳನ್ನು ಒಬ್ಬಳು ರೂಪವತಿ, ಬುದ್ಧಿವಂತೆ ಮತ್ತು ಅತ್ಯಾಕರ್ಷಕ ಹೆಣ್ಣನ್ನಾಗಿ ಮತ್ತು ಸರಕಾರದಲ್ಲಿ ಅತ್ಯಂತ ಉನ್ನತ ಸ್ಥಾನವನ್ನು ಹೊಂದಿರುವ ಸುಧಾಕರ ಹೆಗ್ಡೆಯ (ಅಲೆಕ್ಸಿ ಆರ್ಕಡೊವಿಚ್) ಪತ್ನಿಯನ್ನಾಗಿ ಪರಿಚಯಿಸಲಾಗಿದೆ. ಅವಳ ತೋರಿಕೆಗಷ್ಟೇ ಪಡೆದ ಸಂಪೂರ್ಣತೆಯಿಂದ ಕೂಡಿದ ಜೀವನದ ಹೊರತಾಗಿಯೂ, ತಾನೊಂದು ಪ್ರೇಮರಹಿತವಾದ ಮದುವೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂದು ಭಾವಿಸುತ್ತಿರುತ್ತಾಳೆ. ಮತ್ತು ಭಗವಾನ್ (ವ್ರಾನ್ಸಕಿ)ನ ಜೊತೆಯಲ್ಲಿ ಗಾಡಾನುರಕ್ತತೆಯ ಪ್ರಣಯ ಪ್ರಸಂಗವೊಂದನ್ನು ಪ್ರಾರಂಬಿಸುತ್ತಾಳೆ. ಈ ಪ್ರಣಯ ಪ್ರಸಂಗವು ಅವಳ ಸಾಮಾಜಿಕವಾದ ಪ್ತ್ರತ್ಯೇಕೀಕರಣ, ವೈಯಕ್ತಿಕವಾದ ಯಾತನೆ ಮತ್ತು ಅಂತಿಮವಾಗಿ ಅವಳು ಅವನತಿಗೊಳ್ಳುವ ಘಟನೆಗಳಿಗೆ ಎಡೆಮಾಡಿಕೊಡುತ್ತದೆ.
ಟಾಲ್ಸ್ಟಾಯ್ ಪಾಂಡಿತ್ಯಪೂರ್ಣವಾಗಿ ಅಘನಾಶಿನಿಯ (ಅನ್ನಾ) ಆಂತರಿಕ ಹೋರಾಟಗಳನ್ನು ಮತ್ತು ಅವಳ ಆಯ್ಕೆಯಗಳಿಂದ ಉಂಟಾಗುವು ಪರಿಣಾಮಗಳನ್ನು ಚಿತ್ರಿಸುತ್ತಾನೆ. ಅವಳ ಭಗವಾನ್‌ನ (ವ್ರಾನ್ಸಕಿ) ಮೇಲಿನ ಪ್ರೀತಿಯು ಪ್ರಾಮಾಣಿಕತೆಯಿಂದ ಮತ್ತು ತೀವ್ರತೆಯಿಂದ ಕೂಡಿದ್ದು. ಆದಕ್ಕೆ ದಂಡವಾಗಿ ಅವಳು ತೆತ್ತಿದ್ದೆಂದರೆ ಸಮಾಜದಲ್ಲಿ ಗಳಿಸಿದ್ದ ಕೀರ್ತಿ ಮತ್ತು ಸ್ಥಾನವನ್ನು, ಮತ್ತು ಜೊತೆಗೇ ಅವಳ ಕುಟುಂಬವನ್ನು ಮತ್ತು ಅವಳಲ್ಲಿ ಸಾಕಾರಗೊಂಡಿದ್ದ ಪ್ರಜ್ಞಾವಂತ ಮನಸ್ಸನ್ನು. ಇವರ ಪ್ರಣಯ ಪ್ರಸಂಗವು ಗಾಢವಾಗುತ್ತಿದ್ದಂತೆಯೇ ಅಘನಾಶಿನಿಯನ್ನು ಈರ್ಷ್ಯೆ ಮತ್ತು ಅಬಧ್ರತೆಯು ಹೆಚ್ಚೆಚ್ಚು ಆಹುತಿ ತೆಗೆದುಕೊಳ್ಳಲು ಶುರುಮಾಡುತ್ತದೆ, ಅವಳಿದ್ದ ಸಮಾಜದಲ್ಲಿನ ಕಠಿಣವಾದ ನೈತಿಕ ಕಟ್ಟುಪಾಡುಗಳ ಜೊತೆಯಲ್ಲಿ ತನ್ನ ಸಂತೋಷದಿಂದ ಇರಬೇಕೆನ್ನುವ ಇಂಗಿತವನ್ನು ಸಮನ್ವಯಗೊಳಿಸಿಕೊಳ್ಳಲು ವಿಫಲಳಾಗುತ್ತಾಳೆ. ಈ ಕಾದಂಬರಿಯು ಅವಳ ಭಾವನಾತ್ಮಕವಾದ ಕುಸಿತವನ್ನು ಮತ್ತು ಆಳವಾದ ಮನಶ್ಶಾಸ್ತ್ರೀಯ ಒಳನೋಟಗಳನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ. ಅದು ಕೊನೆಗೂ ಕಾಣಿಸುವುದು ಹೇಗೆ ಸಾಮಾಜಿಕವಾದ ನೀತಿ ನಿಯಮಗಳು ಮತ್ತು ಅವಳದೇ ಆದ ಆಂತರಿಕವಾದ ಸಂಘರ್ಷಗಳು ಅವಳನ್ನು ದುರಂತದಿಂದ ಕೂಡಿದ ಅಂತ್ಯದತ್ತ ಒಯ್ಯುತ್ತದೆ ಎನ್ನುವುದನ್ನು.
ವಿಶೇಷತೆಗಳು
| ISBN | 978-81-972194-7-4 |
| ಭಾಷೆ | ಕನ್ನಡ |
| ಪುಟಗಳು | 748 |
| ಪ್ರಕಟಣೆ ವರ್ಷ | 2025 |
| ಆವೃತ್ತಿ | 1st |
| ತೂಕ | 1000 ಗ್ರಾಂ |
| ಆಯಾಮಗಳು | Book Size : 1/4 Crown(23x15.5) (International Standard Book Size) |





